ಬೆಂಗಳೂರು.
ಮಾಹಿತಿ ತಂತ್ರಜ್ಞಾನ ವಲಯದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಗೆ ಹೇಳೋರು ಕೇಳೋರು ಯಾರೂ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಕೆಲವೊಂದು ಸಮಾಜ ಸೇವೆಯ ಕೆಲಸ ಮಾಡಿ ಪ್ರಶಂಸೆ ಗಿಟ್ಟಿಸುವ ಈ ಸಂಸ್ಥೆ ತನ್ನ ಉದ್ಯೋಗಿಗಳನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಅತ್ಯಂತ ಕಡಿಮೆ ಸಂಬಳ ನೀಡಿ ಶೋಷಣೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಷ್ಠಾನದ ಮೂಲಕ ಮಾಡುವ ಸಮಾಜ ಸೇವೆಯ ಹೆಸರಿನಲ್ಲಿ ಸುದ್ದಿ ಮಾಡುವ ಈ ಸಂಸ್ಥೆ ಯಾವುದೇ ರೀತಿಯ ಕಾರ್ಮಿಕ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ದೂರು ಕೇಂದ್ರ ಸರ್ಕಾರವನ್ನು ಪಡೆದಿದೆ.
ಇದರ ನಡುವೆ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಸಿಲುಕಿರುವ ಸಂಸ್ಥೆಗೆ ರಾಜ್ಯ ಕಾರ್ಮಿಕ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಕೇಂದ್ರ ಕಾರ್ಮಿಕ ಇಲಾಖೆಯ ಸೂಚನೆಗಳ ಅನುಸಾರ ಕ್ರಮ ಕೈಗೊಂಡಿರುವ ರಾಜ್ಯ ಕಾರ್ಮಿಕ ಇಲಾಖೆ ಇನ್ಫೋಸಿಸ್ ನಲ್ಲಿ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ನಿಯಮಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿರುವ ಆರೋಪದ ಕುರಿತಂತೆ ವಿವರಣೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಸಂಸ್ಥೆಯಲ್ಲಿ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತದೆ ನಿರ್ದಿಷ್ಟ ಅವಧಿ ಒಳಗೆ ಕೆಲಸ ಮಾಡಬೇಕು ಎಂಬ ಒತ್ತಡ ಹೇರುವ ಮೂಲಕ ಕಾರ್ಮಿಕರನ್ನು ಶೋಷಿಸುತ್ತಿದೆ ಎಂಬ ಆರೋಪದ ಬಗ್ಗೆ ವಿವರ ನೀಡುವಂತೆ ಕೋರಲಾಗಿದೆ.
ಇತ್ತೀಚೆಗೆ ಇನ್ಫೋಸಿಸ್ ಮೈಸೂರು ಕ್ಯಾಂಪಸ್ಸಿನಲ್ಲಿ ತರಬೇತಿ ಹಂತದಲ್ಲಿರುವ ಸುಮಾರು 300 ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಇನ್ಪೋಸಿಸ್ ಸಂಸ್ಥೆ ಪ್ರಕಟಿಸಿತ್ತು. ತರಬೇತಿಯನ್ನು ಸಮಾಧಾನಕರವಾಗಿ ಪೂರ್ಣಗೊಳಿಸಿಲ್ಲ ಹಾಗೂ ಪರೀಕ್ಷೆಯಲ್ಲಿ ತೆರ್ಗಡೆಗೊಂಡಿಲ್ಲ ಎಂಬ ಕಾರಣ ನೀಡಿ ಇವರನ್ನೆಲ್ಲ ಕೆಲಸದಿಂದ ವಜಾ ಗೊಳಿಸಲಾಗಿತ್ತು.
ಇದರ ವಿರುದ್ಧ ಸ್ವತಂತ್ರ ತಂತ್ರಜ್ಞಾನ ನೌಕರರ ಒಕ್ಕೂಟವು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ .
ಆಫರ್ ಲೆಟರ್ ಕೊಟ್ಟ ನಂತರ ಎರಡು ವರ್ಷ ಕಾಯಿಸಿ ಉದ್ಯೋಗಕ್ಕೆ ಸೇರಿಸಿಕೊಂಡವರನ್ನು ಇನ್ಫೋಸಿಸ್ ಈಗ ಕೆಲಸದಿಂದ ತೆಗೆದುಹಾಕುತ್ತಿದೆ. ಈಗಾಗಲೇ ಎರಡು ವರ್ಷ ಕಾದಿರುವ ಅವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಆಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದರ ಆಧಾರದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಕರ್ನಾಟಕ ಕಾರ್ಮಿಕ ಇಲಾಖೆಗೆ ವಿವಾದವನ್ನು ಪರಿಹರಿಸಲು ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನವನ್ನು ನೀಡಿದೆ.
Previous Articleಕಾಂಗ್ರೆಸ್ ನಾಯಕ ಅಲ್ತಾಫ್ ಗೆ ಬೆದರಿಕೆ ಹಾಕಿದವನು ಹೇಳಿದ್ದೇನು ಗೊತ್ತಾ.
Next Article ಮಗನ Instagram ನಿಂದ ಸಿಕ್ಕಿ ಬಿದ್ದ ಖದೀಮ