ಬೆಂಗಳೂರು,ಜೂ.26-ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ನಗರ ಪೊಲೀಸರು ಇಂದು ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಂಡ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನು ನಾಶಪಡಿಸಲಾಗಿದೆ.
ಸುಮಾರು 25.6 ಕೋಟಿ ರೂ ಮೌಲ್ಯದ ಸುಮಾರು 21 ಟನ್ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದು ಅದನ್ನು ಆಯುಕ್ತರ ಕಚೇರಿಯಲ್ಲಿಂದು ಪ್ರದರ್ಶನಕ್ಕಿಡಲಾಯಿತು.
ಮಾದಕ ಪದಾರ್ಥಗಳನ್ನು ನಾಶಪಡಿಸಲು ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ಅನುಮತಿ ಪಡೆಯಲಾಗಿದೆ. 25 ಕೋಟಿ ಮೌಲ್ಯದ ಮಾದಕ ದ್ರವ್ಯಗಳಾದ ಗಾಂಜಾ, ಅಫೀಮು, ಹೆರಾಯಿನ್, ಕೊಕೈನ್ ಮತ್ತು ಸಿಂಥೆಟಿಕ್ಗಳಾದ ಎಂಡಿಎಂಎ, ಎಲ್‌ಎಸ್‌ಡಿ ಮುಂತಾದ ಮಾದಕ ದ್ರವ್ಯಗಳು ಪೊಲೀಸರ ದಾಸ್ತಾನಿನಲ್ಲಿವೆ. ಬೆಂಗಳೂರು ನಗರ ಒಂದರಲ್ಲೇ ಶೇ 50ಕ್ಕಿಂತ ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿರುವುದು ಗಮನಾರ್ಹ.
ಕಳೆದ 12 ತಿಂಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 8,505 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 5,363 ಪ್ರಕರಣಗಳನ್ನು ಬೇಧಿಸಲಾಗಿದ್ದು ಸ್ಥಳಿಯ ಆರೋಪಿಗಳಸಹಿತ ನೈಜೀರಿಯಾ, ಸುಡಾನ್, ತಾಂಜೇನಿಯಾ ಸೇರಿದಂತೆ ಆಫ್ರಿಕಾ ದೇಶದ ಆರೋಪಿಗಳನ್ನು ಬಂಧಿಸಲಾಗಿದೆ.
ಮಾದಕದ್ರವ್ಯ ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಆಯುಕ್ತ ರಾದ ಸಂದೀಪ್ ಪಾಟೀಲ್,ಸುಬ್ರಹ್ಮಣ್ಯೇಶ್ವರ ರಾವ್, ಜಂಟಿ ಆಯುಕ್ತ ರಮಣ್ ಗುಪ್ತ ಸೇರಿದಂತೆ ನಗರದ ಎಲ್ಲಾ ಡಿಸಿಪಿಗಳು ಪಾಲ್ಗೊಂಡಿದ್ದರು.
ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ
Previous Articleಆಸ್ಪತ್ರೆಯ ಎಂಟನೇ ಮಹಡಿಯಿಂದ ಜಿಗಿದ ರೋಗಿ
Next Article ‘ಹೋಪ್’ ಟ್ರೈಲರ್ ರಿಲೀಸ್