ಹದಿಮೂರು ವರ್ಷದ ಭಾರತೀಯ ಕ್ರಿಕೆಟಿಗನೊಬ್ಬ ಸೋಮವಾರ ಇತಿಹಾಸ ನಿರ್ಮಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಖರೀದಿಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ವೈಭವ್ ಸೂರ್ಯವಂಶಿ ಅವರ ಆಟದ ಹಕ್ಕುಗಳನ್ನು ರಾಜಸ್ಥಾನ್ ರಾಯಲ್ಸ್ ಒಂದು ಕೋಟಿ ಹತ್ತು ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಬಿಡ್ಡಿಂಗ್ ಹಣಾಹಣಿ ಸೂರ್ಯವಂಶಿಯ ಬೆಲೆಯನ್ನು ಹೆಚ್ಚಿಸಿತು.
ಐಪಿಎಲ್ ನ ಹರಾಜಿನಲ್ಲಿ ಲೀಗಿನ 10 ತಂಡಗಳು ತಮ್ಮ ರೋಸ್ಟರ್ಗಳನ್ನು ಭರ್ತಿ ಮಾಡಲು ಆಟಗಾರರನ್ನು ತಮ್ಮದಾಗಿಸಿಕೊಳ್ಳಲು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಸ್ಪರ್ಧಿಸುತ್ತವೆ