ಬೆಂಗಳೂರು,ಫೆ.19-
IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri ) ಮತ್ತು ಶಾಸಕ ಸಾ.ರಾ. ಮಹೇಶ್ (Sa Ra Mahesh) ಜೊತೆಗಿನ ರಾಜಿ ಸಂಧಾನವನ್ನು ಪ್ರಶ್ನಿಸಿರುವ IGP ಆಗಿರುವ IPS ಅಧಿಕಾರಿ ಡಿ. ರೂಪಾ (D Roopa) ಅವರು ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳನ್ನು ಪಟ್ಟಿ ಮಾಡಿದ್ದಾರೆ.
ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಏಕೆ – ಹೀಗೆ ಮುಂತಾದ ಅನೇಕ ಆರೋಪಗಳನ್ನು ಡಿ. ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್ (Facebook) ನಲ್ಲಿ ಮಾಡಿದ್ದು, ಇದರಿಂದ IAS – IPS ನಡುವಿನ ಜಗಳ ತಾರಕಕ್ಕೆ ಏರಿದಂತಾಗಿದೆ.
ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ IGP ಡಿ. ರೂಪಾ ಅವರು 19 ಆರೋಪಗಳ ಪಟ್ಟಿ ಮಾಡಿ ‘ರೋಹಿಣಿ ಮಾಡಿರುವ ಅಕ್ರಮ ಕಾರ್ಯಗಳಿಗೆ ಸಾಕ್ಷಿಗಳು ಇವೆ’ ಎಂದು ಹೇಳಿಕೊಂಡಿದ್ದಾರೆ. ಅನೇಕ ಹಿರಿಯ IAS ಅಧಿಕಾರಿಗಳಿಗೆ ಈಕೆ ಆಕ್ಷೇಪಾರ್ಹ ಚಿತ್ರ ( ಮಹೇಶ್ – ಸಿಂಧೂರಿ ಒಟ್ಟಿಗೆ ಕುಳಿತ )ಕಳಿಸಿದ್ದಾರೆ. ಈಗಲೂ ನನ್ನ ಬಳಿ ಆ ಫೋಟೋಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ (Mandya) CEO ಆದಾಗ ಶೌಚಾಲಯ ಕಟ್ಟಿಸಿದ್ದಕ್ಕಿಂತ ಫಿಗರ್ ಫ್ಲಡ್ಜ್ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದಾರೆ. ಚಾಮರಾಜನಗರದಲ್ಲಿ 24 ಮಂದಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಾಗ ತನಿಖೆ ನಡೆಸದೆ ರೋಹಿಣಿ ಪಾರಾದರು. ಕನ್ನಡದ ಹುಡುಗಿ IAS ಶಿಲ್ಪ ನಾಗ್ ವಿರುದ್ಧ ಜಗಳ, ರಂಪ ಏತಕ್ಕೆ ಎಂದೂ IGP ಡಿ. ರೂಪಾ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸಾರಾ ಮಹೇಶ್ ಮೇಲೆ ಅನೇಕ ಆರೋಪ ಮಾಡಿದರೂ ರೋಹಿಣಿ ಸಿಂಧೂರಿ ಒಂದನ್ನೂ ಪ್ರೂವ್ ಮಾಡಲಿಲ್ಲ. ಅದಕ್ಕೇ ಸಂಧಾನಕ್ಕೆ ಹೋದರಾ? ಪ್ರತಾಪ್ ಸಿಂಹ (Pratap Simha) ಮೇಲೆ ಪ್ರೈವೆಟ್ ಕ್ಲಿನಿಕ್ ಆಕ್ಸಿಜನ್ ಕೇಳಿದ್ದರು ಎಂದು ಆರೋಪ ಮಾಡಿದರೂ ಏಕೆ ಸಾಬೀತು ಮಾಡಲಿಲ್ಲ.
ಹಾಸನ DC ಯಿಂದ ಎತ್ತಂಗಡಿ ಮಾಡಿದಾಗ ಸರ್ಕಾರದ ವಿರುದ್ಧ CAT ಗೆ ಅರ್ಜಿ ಹಾಕಿದರು. CAT ಗೆ ಅರ್ಜಿ ಹಾಕಲು ನನ್ನ ಪತಿ Munish Moudgil ನನ್ನ ಕಣ್ಣೆದುರೇ ಅರ್ಜಿ ಬರೆದು ಆಕೆಗೆ, ಆಕೆಯ ಪತಿಗೆ ಕಳಿಸಿದ್ದರು ಎಂದು ಸಹ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ IPS ಅಧಿಕಾರಿ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿ ಹೋಗಿದ್ದ ಕನ್ನಡದ ಹುಡುಗ ಶರತ್ ಅವರನ್ನು 29 ದಿನ ಗಳಲ್ಲಿ ಎತ್ತಂಗಡಿ ಮಾಡಿಸಿದ್ದು? ಯಾವ ಹೈ ಲೆವೆಲ್ ಇನ್‌ಫ್ಲುಯೆನ್ಸ್‌ನಿಂದ ಎಂದೂ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕೊರೊನಾ ಸಮಯದಲ್ಲಿ ಈಜುಕೊಳ ಕಟ್ಟಿಸಿಕೊಂಡಿದ್ದಕ್ಕೆ ಡಿ. ರೂಪಾ ಕಿಡಿ ಕಾರಿದ್ದಾರೆ.
ಕೋವಿಡ್‌ನಿಂದ ಜನ ಸಾಯುತ್ತಿದ್ದರೆ, ಮಾನವೀಯತೆ ಇಲ್ಲದೆ ಈಜುಕೊಳ ಕಟ್ಟಿಸಿದ್ದು ಸಾಬೀತಾಗಿದೆ. ಮನುಷ್ಯತ್ವ ಇರುವವರು ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಈಜುಕೊಳ ಕಟ್ಟಿಸಿಕೊಳ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ಅನೇಕ ಆರೋಪಗಳನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಡಿ. ರೂಪಾ ಮಾಡಿದ್ದಾರೆ. ಡಿಕೆ ರವಿ (DK Ravi) ಕೇಸ್, ಐಪಿಎಸ್ ಹರೀಶ್ ಸಾವು (IPS Harish), ಸಾರಾ ಮಹೇಶ್ ಜೊತೆಗಿನ ಗುದ್ದಾಟ, ಹರ್ಷ ಗುಪ್ತ (Harsha Gupta) ಜೊತೆ ಜಗಳ, ಮಣಿವಣ್ಣನ್ (Manivannan) ಜೊತೆ ಜಗಳ – ಅನೇಕ ವಿಚಾರಗಳ ಕುರಿತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ಸ್ಮರಿಸಿಕೊಂಡಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಾರೆ.