ನವದೆಹಲಿ
ಸಾಕ್ಷ್ಯಚಿತ್ರವೊಂದರ ಮೂಲಕ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದ BBC ಸಂಸ್ಥೆಯ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department Officers) ದಾಳಿ ನಡೆಸಿ, ಲೆಕ್ಕಪತ್ರಗಳ ತಪಾಸಣೆ ನಡೆಸಿದ್ದಾರೆ. ಇತ್ತೀಚೆಗೆ BBC ಗುಜರಾತ್ ಕೋಮು ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್'(India: The Modi Question) ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ವ್ಯಾಪಕ ಚರ್ಚೆಯಾಗಿತ್ತು.
ನವದೆಹಲಿಯ BBC ಕಚೇರಿಯಲ್ಲಿ IT ಇಲಾಖೆ ಅಧಿಕಾರಿ ಗಳು ತಪಾಸಣೆ ನಡೆಸುತ್ತಿದ್ದು, ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ನೌಕರರು ಕೂಡ ಕಚೇರಿ ಬಿಟ್ಟು ತೆರಳದಂತೆ ತಿಳಿಸಲಾಗಿದೆ. ಗುಜರಾತ್ ಗಲಭೆ ಸಾಕ್ಷ್ಯ ಚಿತ್ರ ಪ್ರದರ್ಶನ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ದೇಶದ ಹಲವೆಡೆ ಸಾಕ್ಷ್ಯ ಚಿತ್ರದ ಬಗ್ಗೆ ಪರ ವಿರೋಧ ಪ್ರತಿಭಟನೆಗಳು ನಡೆದಿದ್ದವು. ಈ ಬೆನ್ನಲ್ಲೆ ಕಾನೂನು ಸಮರ ಕೂಡಾ ಮುಂದುವರೆದಿದೆ. ಇದೀಗ ಆದಾಯ ಮತ್ತು ತೆರಿಗೆ ಇಲಾಖೆ BBC ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಗ್ ಶಾಕ್ ನೀಡಿದೆ.