ಚಿಕ್ಕಮಗಳೂರು,ಜೂ.9-ಎರಡು ಬೃಹತ್ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ತರೀಕೆರೆ ಮೂಲದ ಶಿವಕುಮಾರ್, ಸುಂದ್ರೇಶ್, ಮಹಾಂತೇಶ್ ಹಾಗು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ನೂರ್ ಅಹಮದ್, ಚಿತ್ರದುರ್ಗ ತಾಲೂಕಿನ ಅಂಜಿನಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಕಳೆದ ಆರು ತಿಂಗಳಿಂದ ತಮ್ಮ ಬಳಿಯೇ ಇಟ್ಟುಕೊಂಡಿದ್ದ ಆನೆ ದಂತವನ್ನು, ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡು ಬಂಧಿಸಿ ಎರಡು ಆನೆ ದಂತ ಹಾಗು ಒಂದು ಒಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ತರೀಕೆರೆ ತಾಲೂಕು ಮೂಲದ ಶಿವಕುಮಾರ್ ಹಾಗು ಸುಂದ್ರೇಶ್ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮೀಸಲು ಹಾಗು ದಟ್ಟಾರಣ್ಯಕ್ಕೆ ಅನುಮತಿ ಇಲ್ಲದೆ ಯಾರು ಒಳಗೆ ಪ್ರವೇಶಿಸುವಂತಿಲ್ಲ. ಆದರೂ, ಕಾಫಿ ಎಸ್ಟೇಟ್‍ನಲ್ಲಿ ಕೆಲಸಗಾರರಾಗಿದ್ದ ಶಿವಕುಮಾರ್ ಹಾಗು ಸುಂದ್ರೇಶ್ ಮೀಸಲು ಅರಣ್ಯದ ಹಳ್ಳದಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೋಗುತ್ತಿದ್ದರು. ಈ ವೇಳೆ, ಕಾಡಿನಲ್ಲಿ ಆನೆ ಸಾವನ್ನಪ್ಪಿದ್ದ ಆನೆಯ ದಂತವನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು.
ಆರು ತಿಂಗಳಿಂದ ಇವರ ಬಳಿಯೇ ಇತ್ತು. ಇಂದು ಮಾರಾಟ ಮಾಡಲು ಮುಂದಾಗಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಮಧ್ಯವರ್ತಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ತಿಳಿಸಿದ್ದಾರೆ.
Previous Articleರೈಲಿನಲ್ಲಿತ್ತು 2ಕೋಟಿ.. !
Next Article ವಿಶ್ವದ 1,800 ಚಿತ್ರಮಂದಿರಗಳಲ್ಲಿ 777 ಚಾರ್ಲಿ