ಮಂಗಳೂರು: ಜಮ್ಮು ಕಾಶ್ಮೀರದ ಅಮರನಾಥ ಗುಹೆ ಮಾರ್ಗದಲ್ಲಿ ಸಂಭವಿಸಿದ ಮೇಘಸ್ಪೋಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 30ಮಂದಿಯ ತಂಡ ಸುರಕ್ಷಿತವಾಗಿದೆ. ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಗಳ ತಂಡ ಸುರಕ್ಷಿತವಾಗಿ ಅಮರನಾಥ ತಲುಪಿದೆ. ಇನ್ನು ಯಾತ್ರಿಗಳ ತಂಡದ ಜೊತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಿರಂತರ ಸಂಪರ್ಕದಲ್ಲಿದ್ದಾರೆ.
ಇನ್ನು 28 ಕಿ.ಮೀ.ಸಂಚರಿಸಿದರೆ ನಾವು ಯಾತ್ರಾ ಸ್ಥಳವನ್ನು ತಲುಪಲಿದ್ದು, ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ನಾಳೆ ಬೆಳಿಗ್ಗೆ ಅಮರನಾಥದಲ್ಲಿ ದೇವರ ದರ್ಶನ ಸಿಗುವ ನಿರೀಕ್ಷೆ ಎಂದು ಯಾತ್ರೆ ಹೊರಟ ತಂಡ ವಿಡಿಯೋ ಮೂಲಕ ತಿಳಿಸಿದೆ.