ಜಾರ್ಖಂಡ್‌ನಲ್ಲಿ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಅಕ್ರಮ ಗಣಿಗಾರಿಕೆ ನೆಪದಲ್ಲಿ ಸರ್ಕಾರ ಪತನಕ್ಕೆ ಬಿಜೆಪಿ ಸಂಚು ರೂಪಿಸಿದ್ದು ಆಡಳಿತಾರೂಢ ಯುಪಿಎ ಮೈತ್ರಿಕೂಟ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ.ಆಡಳಿತ ಪಕ್ಷದ ಹಲವು ಶಾಸಕರನ್ನು ಸಂಪರ್ಕಿಸಿರುವ ಬಿಜೆಪಿ ನಾಯಕರು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಶಾಸಕರ ಪಕ್ಷಾಂತರ ಅಥವಾ ರಾಜೀನಾಮೆ ತಡೆಯಲು ಮೈತ್ರಿಕೂಟದವತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತ ಇರುವ ಛತ್ತೀಸಗಡಕ್ಕೆ ರವಾನಿಸಿದೆ. ಅವರನ್ನು ರಾಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಇರಿಸಲಾಗಿದೆ.
ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳ32 ಶಾಸಕರನ್ನು ಹೊತ್ತ ವಿಶೇಷ ವಿಮಾನವು ಕಳೆದ ರಾತ್ರಿ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣವನ್ನು ತಲುಪಿತು. ಅಲ್ಲಿಂದಶಾಸಕರು ಮೂರು ಬಸ್‌ಗಳಲ್ಲಿ ನವರಾಯಪುರ ಸಮೀಪದ ಮೇಫೇರ್ ಲೇಕ್ ರೆಸಾರ್ಟ್‌ಗೆ ತಲುಪಿದರು.
ಮುಖ್ಯಮಂತ್ರಿ ಹೇಮಂತ್ ಸೊರೇನ್ಅವರ ಶಾಸಕ ಸ್ಥಾನದ ಅನರ್ಹತೆ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿರುವ ವರದಿಯ ಬಗ್ಗೆ ಜಾರ್ಖಂಡ್ ರಾಜ್ಯಪಾಲರು ಈವರೆಗೂ ನಿರ್ಧಾರ ತೆಗೆದುಕೊಂಡಿಲ್ಲ. ಸೊರೇನ್ ಅನರ್ಹತೆಗೆ ಆಯೋಗ ಶಿಫಾರಸು ಮಾಡಿದೆ ಎಂಬ ಊಹಾಪೋಹಗಳಿದ್ದು, ಅದು ದೃಢಪಟ್ಟಿಲ್ಲ.
Previous Articleನಾಲಿಗೆಯಿಂದ ಶೌಚಾಲಯ ಸ್ವಚ್ಛಗೊಳಿಸಲು ಹೇಳಿದ ಕಿರಾತಕಿ
Next Article ಎಂ.ಡಿ.ಲಕ್ಷ್ಮೀನಾರಾಯಣ್ ಕಾಂಗ್ರೆಸ್ ಗೆ ಬೈ ಬೈ