ಜೆಹಾನಾಬಾದ್ (ಬಿಹಾರ),ಜೂ.29– ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಐವರು ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ನಗರದ ಜೆಹಾನಾಬಾದ್‌ನ ಘೋಸಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಜೆಹಾನಾಬಾದ್‌ನ ಘೋಸಿಯ ಆಲಾಲ್‌ಪುರದ ರಾಣಿ ಕುಮಾರಿ (6) ಮತ್ತು ಜೀಸಸ್ ಕುಮಾರ್(4) ಸ್ಥಳದಲ್ಲೇ ಎಂದು ಗುರುತಿಸಲಾಗಿದೆ. ಬಬಿತಾ ದೇವಿ, ಅವರ ಮಗ ರವಿಕುಮಾರ್ ಮತ್ತು ಪತಿ ಸಂಜಯ್ ವಿಶ್ವಕರ್ಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಜೆಹಾನಾಬಾದ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಶೇ.90ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ಪ್ರಭಾತ್ ಕುಮಾರ್ ತಿಳಿಸಿದ್ದು, ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಅವರನ್ನು ಪಿಎಂಸಿಎಚ್‌ಗೆ ಕಳುಹಿಸಲಾಗಿದೆ.
ಸಂಜಯ್ ವಿಶ್ವಕರ್ಮ ಎಂಬುವವರ ಪತ್ನಿ ಬಬಿತಾ ದೇವಿ ತಿಂಡಿ ತಯಾರಿಸಲು ಅಡಗೆ ಮನೆಗೆ ತೆರಳಿದ್ದರು.ಈ ವೇಳೆ ಗ್ಯಾಸ್ ಹಚ್ಚಿದ ತಕ್ಷಣ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟಗೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಕೋಣೆಯಾದ್ಯಂತ ವ್ಯಾಪಿಸಿತ್ತು.