ಬೆಂಗಳೂರು, ಅ.3 – ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ (Shimoga) ನಡೆದ ಘರ್ಷಣೆ ನೆಪವಾಗಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ಪ್ರಹಾರ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಅಪಾದಿಸಿದೆ.
ಈ ಕುರಿತು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಜಿಹಾದಿಗಳು ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಕಾಂಗ್ರೆಸ್ ಸಿದ್ದವಾಗಿ ನಿಂತಂತೆ ಕಾಣುತ್ತಿದೆ ಎಂದು
ಗಂಭೀರ ಸ್ವರೂಪದ ಆರೋಪ ಮಾಡಿದೆ.
ಶಿವಮೊಗ್ಗದಲ್ಲಿ (Shimoga) ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ ಗೂಂಡಾಗಳನ್ನೆಲ್ಲೆ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಠ ಮಾನ ಮರ್ಯಾದೆ ಉಳಿದಿದೆಯೇ ಎಂದು ಪ್ರಶ್ನಿಸಿದೆ.
ಮೂಲಭೂತವಾದಿಗಳನ್ನು ಬಿಡುಗಡೆಗೊಳಿಸುವ ಮುಖ್ಯಮಂತ್ರಿ.ಅಮಾಯಕರೆಂದು ಕ್ಲೀನ್‍ಚಿಟ್ ಕೊಡುವ ಗೃಹ ಸಚಿವರು! ಮಾನಸಿಕರಂತೆ ಹೇಳಿಕೆ ಕೊಡುವ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾಗ ಶಿವಮೊಗ್ಗದಲ್ಲಿ ಗಲಭೆ ನಡೆಯದೆ ಮತ್ತೇನು ತಾನೆ ನಡೆದೀತು? ಎಂದು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

2 ಪ್ರತಿಕ್ರಿಯೆಗಳು
Mostbet: onde a sorte e a diversГЈo andam de mГЈos dadas – https://mostbetpt.pro/ , Jogue mais com 100% de bГґnus + 300 giros grГЎtis sГі no Mostbet .
The casino that turns strangers into kings overnight – https://plmotiliu.com/starburst-slot-machine/ , Feel alive with every spin, every card, every win .