ಅನಿತಾ ಭಟ್ ನಿರ್ಮಾಣದ ಚೊಚ್ಚಲ ಚಿತ್ರ ಇಂದಿರಾ ವೂಟ್ ಸೆಲೆಕ್ಟ್ ನಲ್ಲಿ ಜುಲೈ 8 ರಿಂದ ಪ್ರದರ್ಶನ ಕಾಣುತ್ತಿದೆ. ಅನಿತಾ ಭಟ್ ಈಗಾಗಲೇ ತಮ್ಮ ಭಿನ್ನ ಬಗೆಯ ಪಾತ್ರ ಪೋಷಣೆಯಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಇಂದಿರಾ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇಂದಿರಾ ಚಿತ್ರದಲ್ಲಿ ಮೊಹಿನುದ್ದೀನ್ ಶಫಿ, ನೀತು ಶೆಟ್ಟಿ, ಡಿ.ಜೆ ಚಕ್ರವರ್ತಿ, ರೆಹಮಾನ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದ್ದು, ‘ಎ ಡಾಟ್ ಟಾಕೀಸ್’ ನಿರ್ಮಾಣ ಮಾಡಿದೆ.