ಚಿರು ಅಗಲಿಕೆ ನೋವು ಮಾಸುವ ಮುನ್ನವೇ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಆಗಿದೆ. ಅರ್ಜುನ್ ಸರ್ಜಾ ತಾಯಿ, ನಟ ಶಕ್ತಿ ಪ್ರಸಾದ್ ಪತ್ನಿ ಲಕ್ಷ್ಮೀದೇವಿ (84) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.