ಬಾಗಲಕೋಟೆ: ಇತ್ತೀಚೆಗೆ ಗುಂಪು ಘರ್ಷಣೆ ಸಂಭವಿಸಿದ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಲಭೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಪರಿಹಾರ ರೂಪದಲ್ಲಿ ಎರಡು ಲಕ್ಷ ರೂಪಾಯಿ ಹಣವನ್ನು ಮಹಿಳೆಯೊಬ್ಬರಿಗೆ ನೀಡಿದರು. ಇದನ್ನು ಸ್ವೀಕರಿಸಲು ನಿರಾಕರಿಸಿದ ರಾಜ್ಮಾ ಅದನ್ನು ಬಿಸಾಡಿದರು.
ನಮಗೆ ಪರಿಹಾರ ಬೇಡ. ಈ ಪ್ರದೇಶದಲ್ಲಿ ಶಾಂತಿ ನೆಲೆಸಬೇಕು. ಇದಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಮಾ ಮನವಿ ಮಾಡಿದರು.
ಹುಡುಗಿಯನ್ನು ಚುಡಾಯಿಸಿದ್ದ ಕಾರಣಕ್ಕೆ ಕೆರೂರು ಪಟ್ಟಣದಲ್ಲಿ ಇತ್ತೀಚೆಗೆ ಗುಂಪು ಘರ್ಷಣೆ ನಡೆದಿತ್ತು.
ಸಿದ್ದರಾಮಯ್ಯ ನೀಡಿದ ಪರಿಹಾರ ಹಣ ಬಿಸಾಡಿ ಶಾಂತಿಗಾಗಿ ಮನವಿ ಮಾಡಿದ ಮಹಿಳೆ
Previous Articleಮಣಿಪಾಲ: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ರೆಸ್ಟೋರೆಂಟ್
Next Article ಭಾಷೆ ವಿಚಾರಕ್ಕೆ ನಡೆದ ಕೊಲೆ :CID Change Sheet.