ಬೆಂಗಳೂರು : ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಿಂಗರಾಜಪುರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಇಲ್ಲಿ ಸರ್ಕಾರದ ಯಾವುದೇ ಪದವಿ ಕಾಲೇಜು ಇರಲಿಲ್ಲ. ಉನ್ನತ ಶಿಕ್ಷಣ ಬಯಸುವವರು ಖಾಸಗಿ ಕಾಲೇಜಿಗೆ ಹೋಗಬೇಕು ಇಲ್ಲವೇ ದೂರದ ಸರ್ಕಾರಿ ಕಾಲೇಜು ಅರಸಿ ಹೋಗಬೇಕು.
ಈ ಕೊರತೆಯನ್ನು ಮನಗಂಡ ಮಾಜಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಕ್ಷೇತ್ರದ ಜನರಿಗೆ ಕೊಡುಗೆ ರೂಪದಲ್ಲಿ ಪದವಿ ಕಾಲೇಜು ತರುವಲ್ಲಿ ಯಶಸ್ವಿಯಾಗಿದ್ದಾರೆ.
ಲಿಂಗರಾಜಪುರಂನ ಸರ್ಕಾರಿ ಶಾಲಾ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಬಿ ಸಿ ಎ ಮತ್ತು ಬಿ ಕಾಮ್ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ.
ಈ ಕೋರ್ಸ್‌ಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬಹುದು.
ಈ ಕಾಲೇಜಿನಲ್ಲಿ 8 ತರಗತಿಗಳನ್ನು ನಡೆಸಲು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಳಗೊಂಡ ಕೊಠಡಿಗಳು ಸಿದ್ದಗೊಂಡಿವೆ.
ಕ್ಷೇತ್ರದ ಶಾಸಕರಾಗಿರುವ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರೇ ಈ ಕೊಠಡಿಗಳು ಹಾಗು ಅಲ್ಲಿ ಅಳವಡಿಸಿರುವ ಎಲ್ಲಾ ಮೂಲಸೌಕರ್ಯಗಳನ್ನು ಪ್ರಾಯೋಜಿಸಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸರ್ಕಾರದ ವೆಚ್ಚದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಲಭಿಸಿದೆ.
ತಮ್ಮ ಶಾಸಕರ ಶಿಕ್ಷಣ ಪ್ರೀತಿ ಮತ್ತು ಕ್ಷೇತ್ರ ಪ್ರೀತಿಗೆ ಸರ್ವಜ್ಞ ನಗರ ಕ್ಷೇತ್ರದ ಜನತೆ ಅಪಾರ ಹರ್ಷ ಮತ್ತು ಕೃತಜ್ಞತೆ ಅರ್ಪಿಸಿದ್ದಾರೆ.
ನಮ್ಮ ದೂರದೃಷ್ಟಿಯುಳ್ಳ ಕ್ರಿಯಾಶೀಲ ಹಾಗು ಅಚ್ಚುಮೆಚ್ಚಿನ ಶಾಸಕರಾದ ಶ್ರೀ ಕೆ ಜೆ ಜಾರ್ಜ್ ಅವರ ಪ್ರಯತ್ನದಿಂದಾಗಿ, ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾರ್ಯಾರಂಭ ಮಾಡಲಿದೆ. ಸರ್ವಜ್ಞ ನಗರದ ಲಿಂಗರಾಜಪುರಂಗೆ ಮೊದಲ ಪದವಿ ಕಾಲೇಜು ತರುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜನತೆ ಶ್ಲಾಘಿಸಿದ್ದಾರೆ.
ಸರ್ವಜ್ಞ ನಗರ ಕ್ಷೇತ್ರದ ಏಳ್ಗೆಗೆ ಶ್ರಮಿಸುತ್ತಿರುವ ಶ್ರೀ ಕೆ ಜೆ ಜಾರ್ಜ್ ಅವರು ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲೆಂಬ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಾರೆ. ಸರ್ವಜ್ಞನಗರ ಕ್ಷೇತ್ರದ ಯುವಕರಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಪಡೆಯಲು ಉತ್ತಮ ಮಾರ್ಗಗಳನ್ನು ಒದಗಿಸುತ್ತದೆ. ನಮ್ಮ ಶಾಸಕರಾದ ಕೆ ಜೆ ಜಾರ್ಜ್ ಅವರ ಈ ಉದಾತ್ತ ಕಾರ್ಯಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.
ಸರ್ವಜ್ಞ ನಗರಕ್ಕೆ ಮತ್ತೊಂದು ಕಲಶ- ಕೆ.ಜೆ.ಜಾರ್ಜ್ ಗೆ ಮತದಾರರ ಕೃತಜ್ಞತೆ
Previous Articleಬೀದರ್ ನಲ್ಲಿ ಭೀಕರ ಅಪಘಾತ..
Next Article ಚಿತ್ರರಂಗಕ್ಕೆ ಆಘಾತ: ಯುವ ಸಿನಿಮಾ ವಿಮರ್ಶಕ ಕೌಶಿಕ್ ನಿಧನ