ಬೆಂಗಳೂರು, ಆ.5-ಕ್ಷಣಾರ್ಧದಲ್ಲಿ ಕಾರಿನ ಗಾಜು ಹೊಡೆದು ಹಣ,ಚಿನ್ನಾಭರಣ, ಮೊಬೈಲ್,ಲ್ಯಾಪ್‌ಟಾಪ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಕುಖ್ಯಾತ ರಾಮ್ ಜೀ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಕುಲ್ ಹಾಗು ನಟರಾಜನ್ ಬಂಧಿತ ಆರೋಪಿಗಳಾಗಿದ್ದು,1.10ಲಕ್ಷ ನಗದುಸೇರಿ 11ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದರು.
ಬಂಡೇಪಾಳ್ಯದ ಬಳಿ ಪವನ್ ಎಂಬುವರು ನಿಲ್ಲಿಸಿದ ಕಾರಿ ಗಾಜನ್ನು ಕ್ಷಣಾರ್ಧದಲ್ಲಿ ಒಡೆದು ಲ್ಯಾಪ್‌ಟಾಪ್ ಕಳವು ಮಾಡಿದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು