ಬೆಂಗಳೂರು,ಆ.6-ದುಶ್ಚಟಗಳಿಗೆ ಸುಲಭವಾಗಿ ಹಣ ಹೊಂದಿಸಲು ಆಟೋರಿಕ್ಷಾ ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು 2 ಲಕ್ಷ ಮೌಲ್ಯದ 2 ಆಟೋ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಂದಿನಿ ಲೇಔಟ್ ನ ರಘು ಅಲಿಯಾಸ್ ಮಾರಿಗುಡಿ(35)ಬಂಧಿತ ಆರೋಪಿಯಾಗಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಕಳೆದ ಜು.29 ರಂದು ಬೆಳಿಗ್ಗೆ 9ರ ವೇಳೆ ಶಂಕರನಗರದ ಬಿಬಿಎಂಪಿ ಆಸ್ಪತ್ರೆ ಮುಂಭಾಗ ಚಾಲಕರೊಬ್ಬರು ಬಜಾಜ್ ಆಟೋರಿಕ್ಷಾ ವಾಹನವನ್ನು ಲಾಕ್ ನಿಲ್ಲಿಸಿ, ಅದೇ ದಿನ ರಾತ್ರಿ 9 ಗಂಟೆ ವಾಪಸ್ಸು ಬಂದು ನೋಡಿದಾಗ ಕಳವು ಮಾಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ ನಂದಿನಿಲೇಔಟ್ ಪೊಲೀಸರು ಕಾರ್ಯಾಚರಣೆ ಕೈಗೊಂಡು
ವಿಧಾನಸೌಧ ಲೇಔಟ್ ಸರ್ಕಲ್ ಬಳಿ ಆಟೋ ರಿಕ್ಷಾವನ್ನು ಅನುಮಾನಾಸ್ಪದವಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆತ ನೀಡಿದ ಮಾಹಿತಿ ಮೇರೆಗೆ 2 ಲಕ್ಷ ರೂ. ಬೆಲೆ ಬಾಳುವ 2 ಬಜಾಜ್ ಕಂಪನಿ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಟೆಂಟ್ ಹೌಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದು ದುಶ್ಚಟ ಹಾಗು ದೈನಂದಿನ ಖರ್ಚುವೆಚ್ಚದ ಹಣಕ್ಕಾಗಿ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.
ಆರೋಪಿಯ ಬಂಧನದಿಂದ ನಂದಿನಿ ಲೇಔಟ್ ಪೊಲೀಸ್ ಠಾಣೆಯ 2-ತ್ರಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ ಎಂದು ತಿಳಿಸಿದರು. ನಂದಿನಿ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ವಿನೋದ್ ರಾಠೋಡ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ