ಬೆಂಗಳೂರು,ಜು. 4- ಕಾಂಗ್ರೆಸ್ ನ ಕನಕಪುರ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಇದಕ್ಕಾಗಿಯೇ ಸಿದ್ದರಾಮೋತ್ಸವ ನಡೆಸಲಾಗುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ..
ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಆ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಸಿದ್ದರಾಮೋತ್ಸವದ ಬಳಿಕ ಕನಕಪುರದ ಬಂಡೆ ಛಿದ್ರವಾಗಲಿದೆಯೇ?’ ಎಂದು ಬಿಜೆಪಿ ಕೇಳಿದೆ.
‘ಕೆಪಿಸಿಸಿ ಅಧ್ಯಕ್ಷರ ವಿರೋಧ ನಡುವೆಯೂ ಸಿದ್ದರಾಮೋತ್ಸವ ನಡೆಯಲಿದೆ ಎಂದಾದರೆ ಡಿಕೆಶಿ ಇದ್ದೂ ಇಲ್ಲದಂತಾಗಿದ್ದಾರೆ. ಸಿದ್ದರಾಮೋತ್ಸವ ಕೇವಲ ಸಿದ್ದರಾಮಯ್ಯರ ಜನ್ಮದಿನೋತ್ಸವವಲ್ಲ. ಅದು ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಹಲ್ಲಿಲ್ಲದ ಹಾವು’ ಎಂದು ಹೇಳಿದೆ.
Previous Articleಬುಕ್ ಸ್ಟಾಲ್ ನಲ್ಲಿ ಡ್ರಗ್ಸ್ ಮಾರಾಟ.. !
Next Article ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ!!