ಬೆಂಗಳೂರು,ಆ.23-ಮನೆಯವರು ತನ್ನ ಮಾತು ಕೇಳುತ್ತಿಲ್ಲ ಎಂದು ನೊಂದ ವೃದ್ಧರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಾದನಾಯ್ಕನಹಳ್ಳಿಯ ಹೊನ್ನಸಂದ್ರದ ಬಳಿ ನಡೆದಿದೆ.
ಹೊನ್ನಸಂದ್ರದ ರಾಜಪ್ಪ(60) ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬದವರು ನನ್ನ ಮಾತು ಕೇಳುತ್ತಿಲ್ಲವೆಂದು ಮನನೊಂದು ರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರಾಜಪ್ಪ ಹೊನ್ನಸಂದ್ರ ಕ್ರಾಸ್ನಲ್ಲಿ ಹೋಟೆಲ್ ನಡೆಸುತ್ತಿದ್ದು ಕುಟುಂಬದಲ್ಲಿ ಕ್ಷುಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಮಗ, ಸೊಸೆ, ಮೊಮ್ಮಕ್ಕಳು ಯಾರು ತನ್ನ ಮಾತು ಕೇಳುತ್ತಿಲ್ಲವೆಂದು ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯವರು ಮಾತು ಕೇಳಲಿಲ್ಲ ಎಂದು ಹೀಗಾ ಮಾಡೋದು..?
Previous ArticlePSI ನೇಮಕಾತಿಗೆ ನಡೆದಿತ್ತು ಭರ್ಜರಿ ಪ್ಲಾನ್..
Next Article ‘ಯಥಾ ರಾಜ ತಥಾ ಪ್ರಜಾ’ ಎಂದ-ನೃತ್ಯ ನಿರ್ದೇಶಕ ಜಾನಿ ಮಾಸ್ಟರ್