ಬೆಂಗಳೂರು,ಆ.22– ರಾಜ್ಯದಲ್ಲಿ ಇದೀಗ ಮಾಂಸದೂಟದ ರಾಜಕಾರಣ ತೀವ್ರಗೊಂಡಿದೆ.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಪ್ರವಾಸದ ವೇಳೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರು ಎಂಬ ವಿಷಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.
ಈ ವಿಷಯವಾಗಿ ತಮ್ಮ ನಿಲುವು ಸಮರ್ಥಿಸಿರುವ ಸಿದ್ದರಾಮಯ್ಯ ರಾತ್ರಿ ಮಾಂಸ ತಿಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬಹುದಾದರೆ,ಮಧ್ಯಾಹ್ನ ತಿಂದು ಸಾಯಂಕಾಲ ಯಾಕೆ ದೇವಸ್ಥಾನಕ್ಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ವಿಜಯಪುರದಲ್ಲಿ ತಿರುಗೇಟು ನೀಡಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಿಮಗೆ ತಾಖತ್ ಇದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ. ಆಗ ನಿಮ್ಮ ತಾಖತ್ ಗೊತ್ತಾಗುತ್ತೆ’ ಎಂದು ಸವಾಲು ಹಾಕಿದ್ದಾರೆ.
ಒಂದೊಂದು ದೇಗುಲದಲ್ಲಿ ಒಂದೊಂದು ರೀತಿಯ ಧರ್ಮ ಪಾಲನೆ ಸಂಸ್ಕೃತಿ, ನಿಯಮ ಇರುತ್ತದೆ. ಕೆಲವೊಂದು ಕಡೆಗಳಲ್ಲಿ ಮಾಂಸ ಸೇವಿಸಿ ಹೋಗಬಾರದು ಎಂದರು.
ಕೆಲವೊಂದು ಕಡೆ ಮೈಮೇಲೆ ಬಟ್ಟೆ ಹಾಕಿಕೊಂಡು ಹೋಗಬಾರದು. ಬನಿಯನ್ ತೆಗೆದು ದೇಗುಲಕ್ಕೆ ಹೋಗುವ ಸಂಸ್ಕೃತಿ ಇದೆ. ದೇಗುಲ ಪಾವಿತ್ರ್ಯತೆ, ಒಳ್ಳೆಯದಾಗಬೇಕಾದ್ರೆ ಅಲ್ಲಿನ ನಿಯಮ ಪಾಲಿಸೋದು ಎಲ್ಲರ ಜವಾಬ್ದಾರಿ. ಉದ್ದಟತನ ಮಾಡೋದ್ರಿಂದ ದೇವರು ನಂಬುವ ಆಸ್ತಿಕರ ಮನಸ್ಸಿಗೆ ನೋವು ಮಾಡಬಾರದು ಎಂದು ಮನವಿ ಮಾಡಿದರು.
Previous Articleಬಿಜೆಪಿ ಸೇರಿದರೆ ಕೇಸ್ ಇಲ್ಲ..!!
Next Article ಸಾತ್ವಿಕ ಆಹಾರ ಸೇವಿಸೋರು ಮಾಡುವುದೇನು..?