ಬೆಂಗಳೂರು,ಆ.5-ವಾಯು ವಿಹಾರಕ್ಕೆ ಹೋಗುವ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸರ ಅಪಹರಣ ಮಾಡುತ್ತಿದ್ದ ಕುಖ್ಯಾತ ಸರಗಳ್ಳನನ್ನು ಮೈಕೋಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಅಮೂಲ್ ಬಾಳಸಾಹೇಬ್ ಶಿಂಧೆ(31)ಬಂಧಿತ ಆರೋಪಿಯಾಗಿದ್ದಾನೆ ಆತನಿಂದ 6.50,ಲಕ್ಷ ಮೌಲ್ಯದ ಎರಡು ಮಾಂಗಲ್ಯ ಸರಗಳನ್ಬು ಜಪ್ತಿಮಾಡಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಆರೋಪಿಯು 2013ರಿಂದ ಸರಗಳವು ಮಾಡುತ್ತಿದ್ದು ಇಲ್ಲಿಯವರೆಗೆ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ 28 ಸರಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದರು.
2013 ರಲ್ಲಿ ಪರಭಣಿ ಜಿಲ್ಲೆಯಲ್ಲಿ ಒಂದು 2015ರಲ್ಲಿ ಲಾಥೂರ್ ಜಿಲ್ಲೆಯಲ್ಲಿ 4 ಸರಗಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯು ತಮಿಳುನಾಡು,
ಕರ್ನಾಟಕದಲ್ಲಿ ಸರಗಳವು ಕೃತ್ಯ ನಡೆಸುತ್ತಾ ಮೂರು ರಾಜ್ಯಗಳ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಎಂದರು.
Previous Articleಉದ್ಯೋಗ ಕೊಡಿಸುವುದಾಗಿ ವಂಚನೆ : ಶಿಕ್ಷಕ ಸೆರೆ
Next Article ಮಗಳನ್ನು ಮಹಡಿಯಿಂದ ಎಸೆದ ತಾಯಿ