ಬೆಂಗಳೂರು: ಬಾರ್ ಮತ್ತು ಪಬ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಹೊಸ ನಿಯಮ ಜಾರಿ ಮಾಡಿದೆ.
ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಿಗೆ ಅಪ್ರಾಪ್ತ ವಯಸ್ಕರು ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಲ್ಲಿ ಮಾದಕ ದ್ರವ್ಯಗಳ ಸಾಗಾಣಿಕೆ ಮತ್ತು ಬಳಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳ ಲೈಸೆನ್ಸ್‌ಗಳಲ್ಲಿ ನಿಗದಿಪಡಿಸಿರುವಂತೆ ಸಮಯಕ್ಕೆ ಸರಿಯಾಗಿ ಮುಚ್ಚಬೇಕು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪಬ್‌ಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯೊಳಗಾಗಿ ನಿಲ್ಲಿಸಿ, ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
Previous Articleಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ ಸೊಸೆ
Next Article ಒಲಂಪಿಯಾಡ್‌ನಲ್ಲಿ ಬೆಂಗಳೂರು ಯುವಕನಿಗೆ ಚಿನ್ನ