ಬೆಂಗಳೂರು,ಜು.30- ಮನೆಗೆ ನುಗ್ಗಿ ಒಂಟಿ ಮಹಿಳೆಯ ಕೊಲೆಗೈದು ದರೋಡೆ ನಡೆಸಿದ ಪ್ರಕರಣ ಸಂಬಂಧ ಮೂವರು ಹಂತಕರ ಪೈಕಿ ಇಬ್ಬರನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಪಶುಪತಿ ಅಲಿಯಾಸ್ ಪಪಿಯಾ ಹಾಗು ಧೀರಜ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯ ಮನೆಯೊಂದರ ಎಲ್ಲರೂ ಜು.15ರಂದು ಸಂಜೆ ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದನ್ನು ಗಮನಿಸಿದ ಬಂಧಿತರು ಒಂಟಿಯಾಗಿದ್ದ ಅಂಚನಾ ತುಳಸಿಯಾನ( 57) ಅವರನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗು ನಾಲ್ಕು ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ತಾವು ಮಾಡಿರುವ ಕೃತ್ಯ ಯಾರಿಗೂ ತಿಳಿಯಬಾರದೆಂದು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸಹಿತ ದೋಚಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ಎಲ್ಲಾ ಅಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದೇವನಹಳ್ಳಿ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Previous Articleಫಾಝಿಲ್ ಕೊಲೆ 21ಮಂದಿಗೆ ಪೊಲೀಸ್ ಡ್ರಿಲ್
Next Article ತುಂಡು ಭೂಮಿ ರಸ್ತೆ ಪಾಲು ನೇಣಿಗೆ ಕೊರೊಳ್ಳೊಡಿದ ರೈತ