ಬೆಂಗಳೂರು, ಆ.11-ಶೋಕಿ ಮಾಡಲು ದುಬಾರಿ ಬೈಕ್ಗಳನ್ನ ಕಳ್ಳತನ ಮಾಡುತ್ತಿದ್ದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಪವನ್ ಹಾಗು ಆಂಧ್ರಪ್ರದೇಶದ ಮೂಲದ ಸತೀಶ್ ಯಾದವ್ ಬಂಧಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಯಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದರು.
ಪವನ್, ಅರ್ಧಕ್ಕೆ ಡ್ರಾಪ್ ಔಟ್ ಆದರೆ, ಇತ್ತ ಸತೀಶ್ ಬಿ.ಟೆಕ್ ಮುಂದುವರಿಸಿದ್ದ. ಆಪ್ತ ಸ್ನೇಹಿತರಾಗಿದ್ದ ಇಬ್ಬರು ಶೋಕಿಗಾಗಿ ಹಿಡಿದಿದ್ದು ಅಡ್ಡದಾರಿಯನ್ನ. ಬೈಕ್ಗಳನ್ನು ಕಳವು ಕೃತ್ಯಕ್ಕಿಳಿದು ಆಂಧ್ರಕ್ಕೆ ತೆಗೆದುಕೊಂಡು ಹೋಗುವಾಗ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇಬ್ಬರು ಸೇರಿ ಕಳ್ಳತನ ಮಾಡಿದ್ದ 12 ರಾಯಲ್ ಎನ್ಫೀಲ್ಡ್ ಬೈಕ್, 2 ಡ್ಯೂಕ್, ಒಂದು ಪಲ್ಸರ್ ಎನ್ ಎಸ್, ಒಂದು ಡ್ಯೂಕ್ ಬೈಕ್ಗಳನ್ನು ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ಇವರಿಬ್ಬರು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಅದರಿಂದ ಬರುತ್ತಿದ್ದ ಹಣದಿಂದ ಶೋಕಿ ಮಾಡುತ್ತಿದ್ದರು.
ಶೋಕಿಗೆ ದುಬಾರಿ ಬೈಕ್ ಕಳ್ಳತನ
ಇಬ್ಬರು ಬಿಟೆಕ್ ವಿದ್ಯಾರ್ಥಿಗಳು ಸೆರೆ
Previous ArticleRocketry ಸಿನೆಮ ಸುಳ್ಳು ಕಥೆ ಎಂದ ನಂಬಿ ನಾರಾಯಣ್ ಸಹೋದ್ಯೋಗಿ ಶಶಿಕುಮಾರ್
Next Article BMTC ಬಸ್ ನಲ್ಲಿ ಪ್ರಯಾಣ ಉಚಿತ…