ಬೆಂಗಳೂರು,ಆ.4-ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಾಣೆ ಮಾಡುತ್ತಿದ್ದ ಇಬ್ಬರೂ ಸ್ಮಗ್ಲರ್ಸ್ ಗಳನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 69.74 ಲಕ್ಷ ಮೌಲ್ಯದ 1 ಕೆಜಿ 334 ಗ್ರಾಂ ಚಿನ್ನ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಶ್ರೀಲಂಕಾದಿಂದ ನಗರಕ್ಕೆ ಬಂದಿದ್ದ ಪ್ರಯಾಣಿಕರು, ಸೋಪ್ ರೀತಿಯಲ್ಲಿ ಚಿನ್ನವನ್ನು ಇಬ್ಬರು ಸಾಗಾಟ ಮಾಡುತ್ತಿದ್ದರು. ಈ ವೇಳೆ ಲಗೇಜ್ನಲ್ಲಿದ್ದ ಸೋಪ್ ಮಾದರಿಯ ವಸ್ತುಗಳನ್ನ ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ.
ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಸೋಪ್ ನಲ್ಲಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದವರ ಸೆರೆ..!!
Previous Articleರಾಜಕೀಯ ಪ್ರವೇಶಿಸಿದ ಖ್ಯಾತ ನಟ
Next Article ATM ದೋಚಲು ಬಂದರು… ಆದರೆ ಆಗಿದ್ದೇ ಬೇರೆ..!