ಬೆಂಗಳೂರು : ರಾಜಕಾರಣದಲ್ಲಿ ಊಟ ಎಂಬುದು ಚರ್ಚೆಯ ವಿಚಾರವೇ ಅಲ್ಲ. ಬಿಜೆಪಿಯು ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುತ್ತಿದ್ದು ತನ್ನ ದುರಾಡಳಿತದ ಮೂಲಕ ಹಿಂದೂಗಳ ಬದುಕು ಮತ್ತು ಮನಸ್ಸನ್ನು ಹಲವಾರು ಬಗೆಯಲ್ಲಿ ನೋಯಿಸಿದ್ದರೂ ಕೂಡಾ ಈಗ ಹಿಂದೂ ಭಾವನೆಯ ಬಗ್ಗೆ ಮಾತನಾಡುತ್ತಿರುವುದು ತಮಾಷೆಯ ಸಂಗತಿ ಎಂದು ಮಾಜಿ ಮಂತ್ರಿ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ನನ್ನ ಪ್ರಕಾರ ಕೆಟ್ಟ ಮನಸ್ಸು ಆಹಾರವನ್ನು ಅವಲಂಬಿಸಿಲ್ಲ ಅದು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ.ಮಾನವ ಮೂಳೆ ಮಾಂಸಗಳ ತಡಿಕೆ” , ಎಂಬ ಕೀರ್ತನೆಕಾರರ ಮಾತುಗಳನ್ನು ಬಿಜೆಪಿಗರು ಮರೆಯಬಾರದು ಎಂದಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನು ಊಟ ಮಾಡಿದರು ಎಂಬುದು ನನಗೆ ತಿಳಿದಿಲ್ಲ ಅದು ತಿಳಿದುಕೊಳ್ಳಲೇ ಬೇಕಾದ ವಿಚಾರವೂ ಅಲ್ಲ. ಸಾತ್ವಿಕ ಆಹಾರ ತಿನ್ನುವವರು ಈ ಸಮಾಜದಲ್ಲಿ ಮಾಡುತ್ತಿರುವ ದೌರ್ಜನ್ಯ ಎಷ್ಟು ಎಂಬುದು ನಮಗೇನು ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾತ್ವಿಕ ಆಹಾರ ಸೇವಿಸುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವೆ ಎನ್ನುತ್ತಾರೆ.
ಸಾತ್ವಿಕ ಆಹಾರ ಸೇವಿಸುವ ತೇಜಸ್ವಿ ಸೂರ್ಯ ಜನ ಪ್ರತಿನಿಧಿಯಾಗಿದ್ದುಕೊಂಡೇ ಮುಸಲ್ಮಾನರ ಮೇಲೆ ನೇರವಾಗಿ ದ್ವೇಷ ಕಾರುತ್ತಾರೆ ಸಾತ್ವಿಕ ಆಹಾರ ಸೇವನೆ ಮಾಡುತ್ತೇವೆ ಅಂತಾ ಹೇಳಿ ಅಮಾನವೀಯ ನಡವಳಿಕೆ ಪ್ರದರ್ಶನ ಮಾಡುತ್ತಿರುವುದೇ ನನ್ನ ಪ್ರಕಾರ ದೇವರ ಮೇಲಿನ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುವಂತಹ ಕೃತ್ಯವಾಗಿದೆ ಎಂದಿದ್ದಾರೆ.
Previous Articleಹಂದಿಮಾಂಸ ತಿಂದು ಹೋಗಿ ನೋಡೋಣಾ…!!
Next Article ಪ್ರಧಾನಿ ಮಾದಕ ವಸ್ತು ಸೇವಿಸಿಲ್ಲ