ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ಶೇ.40 ರಷ್ಟು ಕಮೀಷನ್ ನಡೆಯುತ್ತಿದೆ ಎಂಬುದು ಈಗ ಹಳೆಯ ಸುದ್ದಿ. ಹೊಸ ಸುದ್ದಿ ಏನಂದರೆ ನೀವೇ ಅಚ್ಚರಿ ಪಡ್ತೀರಾ, ಯಾಕೆಂದರೆ ಶೇ.40 ರಷ್ಟು ಕಮೀಷನ್ ದೂರು ಪ್ರಧಾನಿ ಸಚಿವಾಲಯವನ್ನು ತಲುಪಿತ್ತು.
ಪ್ರಧಾನಿ ಸಚಿವಾಲಯ ಈ ಸಂಬಂಧ ಕೆಲವು ಪ್ರಾಥಮಿಕ ಮಾಜಿ ಕೂಡಾ ಕಲೆ ಹಾಕಿತ್ತು. ಹೀಗಾಗಿ ಕಮೀಷನ್ ವೀರರಿಗೆ ತಕ್ಕ ಶಾಸ್ತಿ ಆಗಿದೆ ಅಥವ ಆಗಲಿದೆ ಎಂದು ನೀವೇನಾದರೂ ಅಂದುಕೊಂಡರೆ ಅದು ನಿಮ್ಮ ಭ್ರಮೆಯಾಗಲಿದೆ.
ವಾಸ್ತವವೇನು ಗೊತ್ತಾ? ಇದೀಗ ಈ ಕಮೀಷನ್ ಪ್ರಮಾಣ ಹೆಚ್ಚಾಗಿರುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು, ಅದರ ಹಣವನ್ನು ಪಡೆಯಬೇಕಾದರೆ ಕಮಿಷನ್ ಪ್ರಮಾಣ ಶೇ 40ರಿಂದ ಶೇ 50ರಷ್ಟಾಗಿದೆ’ ಎಂದು ಆರೋಪಿಸಿ ಮುಖ್ಯ ಆಯುಕ್ತರಿಗೆ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ದೂರು ಸಲ್ಲಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿರುವ ನಮ್ಮ ಗುತ್ತಿಗೆದಾರರಿಗೆ 22 ತಿಂಗಳಿಂದ ಬಿಲ್ ಪಾವತಿಯಾಗಿಲ್ಲ. ತಾವು ಹೊಸ–ಹೊಸ ಆದೇಶಗಳನ್ನು ಹೊರಡಿಸಿರುವುದರಿಂದ ಗುತ್ತಿಗೆದಾರರ ಆರೋಪದಂತೆ ಶೇ 40ರ ಕಮಿಷನ್ ಶೇ 50ರ ಹಂತಕ್ಕೆ ತಲುಪಿದೆ’ ಎಂದು ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಹಾಗೂ ಪದಾಧಿಕಾರಿಗಳು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Previous Article‘ಯಥಾ ರಾಜ ತಥಾ ಪ್ರಜಾ’ ಎಂದ-ನೃತ್ಯ ನಿರ್ದೇಶಕ ಜಾನಿ ಮಾಸ್ಟರ್
Next Article ಅಮಿತಾಬ್ ಬಚ್ಚನ್ ಗೆ ಕೋವಿಡ್-19 ಪಾಸಿಟಿವ್ ಧೃಡ