ಸಂಗ್ರಹಗಳು
    • ಮಾರ್ಚ್ 2026
    • ಫೆಬ್ರವರಿ 2026
    • ಜನವರಿ 2026
    • ಡಿಸೆಂಬರ್ 2025
    • ನವೆಂಬರ್ 2025
    • ಅಕ್ಟೋಬರ್ 2025
    • ಸೆಪ್ಟೆಂಬರ್ 2025
    • ಆಗಷ್ಟ್ 2025
    • ಜುಲೈ 2025
    • ಜೂನ್ 2025
    • ಮೇ 2025
    • ಏಪ್ರಿಲ್ 2025
    • ಮಾರ್ಚ್ 2025
    • ಫೆಬ್ರವರಿ 2025
    • ಜನವರಿ 2025
    • ಡಿಸೆಂಬರ್ 2024
    • ನವೆಂಬರ್ 2024
    • ಅಕ್ಟೋಬರ್ 2024
    • ಸೆಪ್ಟೆಂಬರ್ 2024
    • ಆಗಷ್ಟ್ 2024
    • ಜುಲೈ 2024
    • ಜೂನ್ 2024
    • ಮೇ 2024
    • ಏಪ್ರಿಲ್ 2024
    • ಮಾರ್ಚ್ 2024
    • ಫೆಬ್ರವರಿ 2024
    • ಜನವರಿ 2024
    • ಡಿಸೆಂಬರ್ 2023
    • ನವೆಂಬರ್ 2023
    • ಅಕ್ಟೋಬರ್ 2023
    • ಸೆಪ್ಟೆಂಬರ್ 2023
    • ಆಗಷ್ಟ್ 2023
    • ಜುಲೈ 2023
    • ಜೂನ್ 2023
    • ಮೇ 2023
    • ಏಪ್ರಿಲ್ 2023
    • ಮಾರ್ಚ್ 2023
    • ಫೆಬ್ರವರಿ 2023
    • ಜನವರಿ 2023
    • ಡಿಸೆಂಬರ್ 2022
    • ನವೆಂಬರ್ 2022
    • ಅಕ್ಟೋಬರ್ 2022
    • ಸೆಪ್ಟೆಂಬರ್ 2022
    • ಆಗಷ್ಟ್ 2022
    • ಜುಲೈ 2022
    • ಜೂನ್ 2022
    • ಮೇ 2022
    • ಏಪ್ರಿಲ್ 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಒಬ್ಬಂಟಿಯಾಗಿದ್ದ ವೃದ್ಧೆಯನ್ನು ಹೊಡೆದು ದರೋಡೆ..!
    ಸುದ್ದಿ

    ಒಬ್ಬಂಟಿಯಾಗಿದ್ದ ವೃದ್ಧೆಯನ್ನು ಹೊಡೆದು ದರೋಡೆ..!

    vartha chakraBy vartha chakraಜುಲೈ 25, 2022Updated:ಜುಲೈ 25, 2022ಯಾವುದೇ ಟಿಪ್ಪಣಿಗಳಿಲ್ಲ3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ‌ ಮಾಡಿ ಚಿನ್ನಾಭರಣ ಹಾಗು ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

    ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯ ಅಕ್ಕು(85) ಎಂಬವರು ಮನೆಯಲ್ಲಿ ಒಬ್ಬರೆ ಇದ್ದಾಗಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಹಿಂಭಾಗದಲ್ಲಿದ್ದ ಅಜ್ಜಿಯ ತಲೆಯ ಹಿಂಭಾಗಕ್ಕೆ ಕಟ್ಟಿಗೆಯಿಂದ ಹೊಡೆದು ನಂತರ ಅಕ್ಕುನ ಎರಡು ಕಿವಿಯಲ್ಲಿದ್ದ ಚಿನ್ನವನ್ನು ಎಳೆದಿದ್ದಾನೆ. ನಂತರ ಮನೆಯೊಳಗೆ ಹೋಗಿ ಚೀಲದಲ್ಲಿ ಇದ್ದ ಸುಮಾರು 20,000 ಹಣವನ್ನು ದರೋಡೆ ಮಾಡಿ ಹೋಗಿದ್ದ. ನಂತರ ಶಾಲೆಯಿಂದ ಸುಮಾರು 2 ಗಂಟೆಗೆ ಮನೆಗೆ ಮೊಮ್ಮಗಳಾದ ಮೌರ್ಯ ಬಂದಾಗ ಅಜ್ಜಿ ಕಾಣದಿದ್ದಾಗ ಸುತ್ತಮುತ್ತ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಮನೆಯ ಹಿಂಭಾಗದಲ್ಲಿ ತಲೆಗೆ ಗಾಯಗೊಂಡು ಬೊಬ್ಬೆ ಹಾಕುವುದನ್ನು ಕಂಡಿದ್ದಾಳೆ. ತಕ್ಷಣ ಪಕ್ಕದ ಮನೆಯ ಸಂಬಂಧಿ ಮಾಧವ ಎಂಬವರ ಮನೆಗೆ ಓಡಿ ವಿಷಯ ತಿಳಿಸಿದ್ದಾಳೆ. ಈ ವೇಳೆ ಮನೆಗೆ ಓಡಿಬಂದು ಅಕ್ಕು ಅವರನ್ನು ಆಸ್ಪತ್ರೆಗೆ ಸಾಗಿಸಲು ವಾಹನಕ್ಕೆ ಕರೆ ಮಾಡಿ ಕಾಯುತ್ತಿದ್ದಾಗ ಅಕ್ಕು ಅಸ್ವಸ್ಥತೆಯಿಂದ ರಕ್ತಸಾವ್ರವಾಗಿ ಮನೆಯ ಮುಂಬಾಗದಲ್ಲಿ 2:15 ರ ವೇಳೆಗೆ ಸಾವನ್ನಪ್ಪಿದ್ದಾರೆ. ಮನೆಯವರಿಗೆ ಅಕ್ಕುನ ಕಿವಿ ಹರಿದಿದ್ದು ಗೊತ್ತಾಗಿದೆ. ನಂತರ ಮನೆಯನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿರುತ್ತದೆ. ಇದರಿಂದ ಯಾರೋ ದರೋಡೆ ಮಾಡಲು ಬಂದವರು ಅಕ್ಕುನ ಮೇಲೆ ಹಲ್ಲೆ ಮಾಡಿ ಹೋಗಿರುವುದು ಅನುಮಾನ ಬರುತ್ತದೆ. ನಂತರ ಈ ಮಾಹಿತಿಯನ್ನು ಧರ್ಮಸ್ಥಳ ಪೊಲೀಸರಿಗೆ ತಿಳಿಸಿದ್ದು ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಮಂಗಳೂರು ಎಫ್.ಎಸ್.ಎಲ್ ತಂಡದ ಡಿವೈಎಸ್ಪಿ ಗೌರೀಶ್ ತಂಡ ಬಂದು ಪರಿಶೀಲನೆ ನಡೆಸಿದ್ದು ಪೊಲೀಸ್ ನಾಯಿ ಆರೋಪಿಯ ಜಾಡು ಹಿಡಿದು ಮನೆಯಿಂದ ಒಳರಸ್ತೆಯಲ್ಲಿ ಸುಮಾರು 700 ಮೀಟರ್ ವರೆಗೆ ಹೋಗಿ ವಾಪಸ್ ಅಗಿದೆ. ಶವವನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಶವಪರೀಕ್ಷೆಗೆ ಸಾಗಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ನಡೆದ ಏಂಟು ಗಂಟೆ ಒಳಗೆ ಕೊಲೆ ಮಾಡಿದ ಸಂಬಂಧಿ ಯುವಕ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೊಲೆ‌‌ ನಡೆದ ಮನೆಯವರ ಹಿನ್ನಲೆ: ಕೊಲೆಯಾದ ಅಕ್ಕು ಅವರ ಮನೆಯಲ್ಲಿ ಒಟ್ಟು ಆರು ಜ‌ನ ಇರುವುದು ಮಗ ಡೀಕಯ್ಯ ಸೊಸೆ ಲಲಿತಾ, ಮೊಮ್ಮಗ ಪ್ರತೀಕ್, ಮೊಮ್ಮಗಳು ಮೌರ್ಯ ಮತ್ತು ಅಕ್ಕು ಮಗಳೊಬ್ಬಳು ಇಲ್ಲಿಯೇ ಇರುವುದು. ಪ್ರತೀಕ್ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಡೀಕಯ್ಯ , ಲಲಿತಾ, ಅಕ್ಕು ಮಗಳು ದೇವಕಿ ಸೇರಿ ಮೂರು ಜನರು ಸ್ಥಳೀಯರೊಬ್ಬರ ಮನೆಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸಕ್ಕೆ ಹೋಗುತ್ತಾರೆ ಮೊಮ್ಮಗಳು ಮೌರ್ಯ ಶಾಲೆಗೆ ಹೋಗುತ್ತಾಳೆ ಈ ವೇಳೆ ಅಕ್ಕು ಮಾತ್ರ ಮನೆಯಲ್ಲಿ ಇದ್ದು ಮನೆಕೆಲಸವನ್ನು ಎಲ್ಲಾ ಮಾಡುತ್ತಿದ್ದರು. ಕೊಲೆ ನಡೆದ ದಿನ ಅಕ್ಕು ಮನೆಯೊಳಗೆ ಊಟ ಮಾಡಲು ತಟ್ಟೆಗೆ ಊಟ ಹಾಕಿ ರೆಡಿ ಮಾಡಿದ್ದರು, ಈ ವೇಳೆ ಕೊಲೆಯಾಗಿ ಹೋಗಿದ್ದಾರೆ.

    ಪಕ್ಕದ ಮನೆಯ ಯುವಕನ ಸುಳಿವಿನಿಂದ ಆರೋಪಿ ವಶಕ್ಕೆ : ಕೊಲೆಯಾಗಿರುವ ಅಕ್ಕುನ ಬಗ್ಗೆ ಮಾಹಿತಿ ತಿಳಿದ ಊರವರು ಸ್ಥಳಕ್ಕೆ ಬಂದು ನೋಡಿದಿದ್ದಾರೆ. ಇದರಲ್ಲಿ ಪಕ್ಕದ ಮನೆಯ ನಿವಾಸಿ ಬೇಬಿ ಎಂಬವರ ಮಗ ಸುದರ್ಶನ್ ಎಂಬಾತ ತನ್ನ ಮನೆಗೆ ಟಿಲ್ಲರ್ ಗೆ ಡೀಸೆಲ್‌ ತರಲು ಬೈಕ್ ನಲ್ಲಿ ಹೋಗಿ ವಾಪಸ್ ಮನೆಗೆ ಬರುವಾಗ ಯುವಕನೊಬ್ಬ ಅಕ್ಕು ಮನೆಯಿಂದ ನಡೆದು ಕೊಂಡು ಹೋಗಿರುವುದನ್ನು ನೋಡಿದ್ದಾನೆ. ಈ ವಿಚಾರ ಅಕ್ಕುನ ಮಗನಾದ ಡೀಕಯ್ಯ ಅವರಿಗೆ ಮಾಹಿತಿ ನೀಡಿದ್ದಾನೆ. ಆ ವ್ಯಕ್ತಿ ಅಕ್ಕು ಮಗ ಡೀಕಯ್ಯ ಅವರ ಹೆಂಡತಿಯ ಅಕ್ಕ ಸುಂದರಿ ಅವರ ಮಗ ಅಶೋಕ್ ಅಗಿದ್ದ ತಕ್ಷಣ ಆತನ ಮೊಬೈಲ್ ಗೆ ಡೀಕಯ್ಯ ಕರೆ ಮಾಡಿ ಎಲ್ಲಿದ್ದಿಯಾ ಎಂದಾಗ ನಾನು ನಾರವಿಯಲ್ಲಿ ಇದ್ದೇನೆ ಉತ್ತರಿಸಿದ್ದಾನೆ. ಅವಾಗ ಅನುಮಾನ ಬಂದು ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಅವರಿಗೆ ಮೊಬೈಲ್ ಸಂಖ್ಯೆ ನೀಡಿದ್ದಾರೆ ತಕ್ಷಣ ಎಚ್ಚೆತ್ತು ಮೊಬೈಲ್ ಲೋಕೇಷನ್ ನೋಡಿದಾಗ ಉಜಿರೆಯಲ್ಲಿ ಬಂದಿದೆ. ಮತ್ತೆ ನೋಡಿದಾಗ ಸೋಮಂದಡ್ಕದಲ್ಲಿ ಬಂದಿದೆ. ತಕ್ಷಣ ಧರ್ಮಸ್ಥಳ ಪೊಲೀಸ್ ಸಿಬ್ಬಂದಿಗಳು ಆಲರ್ಟ್ ಅಗಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅವಾಗ ಕಂಠಪೂರ್ಟಿ ಕುಡಿದು ಹೊಟೇಲ್ ನಲ್ಲಿ ಕುಳಿತಿದ್ದ. ಅಲ್ಲಿಂದ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

    ಆರೋಪಿಯ ಹಿನ್ನಲೆ : ಕೊಲೆ‌ ಮಾಡಿ ದರೋಡೆ ಮಾಡಿದ ಆರೋಪಿ ಕಡುರುದ್ಯಾವರ ಗ್ರಾಮದ ಕಾನರ್ಪದ ಕುಮೇರು ಮನೆಯ ಸುಂದರಿಯ ಮೊದಲ ಅವಿವಾಹಿತ ಮಗ ಅಶೋಕ್(28) ಅಗಿದ್ದಾನೆ. ಈತ ಐಸ್ ಕ್ರೀಮ್ ವಾಹನದಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಬಂಧಿಯಾಗಿದ್ದ ಕಾರಣ ಅಕ್ಕು ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಹಣ ಕೂಡ ಕೇಳಿ ಪಡೆದು ಹೋಗುತ್ತಿದ್ದ ಈತನಿಗೆ ಕುಡಿಯುವ ಚಟ ಕೂಡ ಇದ್ದು ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ , ಹಣ ಇಲ್ಲದ ಕಾರಣ ಸಂಬಂಧಿಕರನ್ನು ಕೊಲೆ ಮಾಡಿ ದರೋಡೆ ಮಾಡಿದ್ದು ಇದರ ಹಣದಿಂದ ಮಜಾ ಮಾಡುವ ಮೊದಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾ‌ನೆ.

    Verbattle
    Verbattle
    Verbattle
    mangalore ಕೊಲೆ ಬೈಕ್ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ದಾಳಿ
    Next Article ಆಪೇ ಆಟೋ ಮತ್ತು ಓಮಿನಿ ಕಾರ್ ಮುಖಾಮುಖಿ ಡಿಕ್ಕಿ…!
    vartha chakra
    • Website

    Related Posts

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    ಮಾರ್ಚ್ 5, 2026

    KPSC ಅಕ್ರಮ ಆರೋಪ -ಶಾಲಿನಿ ರಜನೀಶ್ ಗೆ ವರದಿ

    ಮಾರ್ಚ್ 5, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    KPSC ಅಕ್ರಮ ಆರೋಪ -ಶಾಲಿನಿ ರಜನೀಶ್ ಗೆ ವರದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Andrewhooca ರಲ್ಲಿ ಜೆಡಿಎಸ್ ಗೆ ಚಕ್ರ ಬೇಕಂತೆ!
    • Robertmib ರಲ್ಲಿ ಎ.ಐ ಹುಡುಗಿ ನೋಡಿ ಹಳ್ಳಕ್ಕೆ ಬಿದ್ದ!
    • Kbwtje ರಲ್ಲಿ ಸತೀಶ್ ಜಾರಕಿಹೊಳಿ ಅವರಲ್ಲಿ ಡಿಕೆ ಸುರೇಶ್ ಕೇಳಿದ್ದೇನು.?
    Latest Kannada News

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    ಮಾರ್ಚ್ 5, 2026

    ಖಮೇನಿ ಸಾವು- ಹ್ಯಾರಿಸ್ ಗೆ ಸಂಕಷ್ಟ!

    ಮಾರ್ಚ್ 5, 2026

    ನೇಪಾಳ ಸುತ್ತಿದರೂ ಸಿಗಲಿಲ್ಲ ಚಿನ್ನ!

    ಮಾರ್ಚ್ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.