ಚಾಮರಾಜನಗರ: ಇಲ್ಲಿನ ಗ್ರಾಮಸ್ಥರು ಬೆಳಗಿನ ಜಾವ 2ಗಂಟೆಗೆ ತುಂಬು ಗರ್ಭಿಣಿಯನ್ನು ಡೋಲಿ ಕಟ್ಟಿ ದಟ್ಟಾರಣ್ಯದಲ್ಲಿ 4 ಗಂಟೆಗಳ ಕಾಲ ಸತತವಾಗಿ ನಡೆದು ಆಸ್ಪತ್ರೆಗೆ ಕರೆ ತಂದ ಘಟನೆ ನಡೆದಿದೆ. ತುಂಬು ಗರ್ಭಿಣಿ ಶಾಂತಲಾ ಅವರಿಗೆ ಬೆಳಗಿನ ಜಾವ 2ಗಂಟೆಯ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹದೇಶ್ವರ ಅರಣ್ಯ ಪ್ರದೇಶದ ಜನರ ಅನುಕೂಲಕ್ಕಾಗಿ ಅರಣ್ಯ ಇಲಾಖೆಯು ಜನವನ ಸಾರಿಗೆ ವ್ಯವಸ್ಥೆ ತಂದಿದ್ದರೂ ದೂರವಾಣಿ ಸಂಪರ್ಕ ಹಾಗು ಸರಿಯಾದ ಸಮಯಕ್ಕೆ ಅಧಿಕಾರಿಗಳು ಸಿಗದೇ ಇದ್ದ ಕಾರಣ ಗ್ರಾಮಸ್ಥರು ಡೋಲಿ ಮೂಲಕ ಗರ್ಭಿಣಿಯನ್ನು ದೊಡ್ಡಾಣೆಯಿಂದ 2ಗಂಟೆಗೆ ಹೊರಟು 6ಗಂಟೆಗೆ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದ್ದಾರೆ. ಅರಣ್ಯ ಮಧ್ಯದಲ್ಲಿರುವ ಗ್ರಾಮಸ್ಥರ ನೋವು ಸರ್ಕಾರಕ್ಕೆ ತಲುಪುವುದು ಎಂತೋ ಕಾದು ನೋಡಬೇಕಿದೆ.
ಬೆಳಗಿನ ಜಾವ 4 ಗಂಟೆ ಕಾಲ ಗರ್ಭಿಣಿಯನ್ನ ಹೊತ್ತು ನಡೆದ ಮಹದೇಶ್ವರ ಬೆಟ್ಟದ ಜನ
Previous Articleದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ರೈಲು ಹಳಿ ಮೇಲೆ ಗುಡ್ಡ ಕುಸಿತ
Next Article ಜನತಾ ಜನಮಿತ್ರ ಯಾತ್ರೆ..