ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಮೊದಲ ಬಾರಿ ತಮ್ಮ ಸ್ನೇಹಿತರ ಜತೆ ಸೇರಿಕೊಂಡು ನಿರ್ಮಾಣ ಮಾಡಿರುವ ಡೊಳ್ಳು ಚಿತ್ರವು ಡೊಳ್ಳು ಕುಣಿತದ ಸುತ್ತ ಹಣೆದಿರುವ ಕಥೆಯನ್ನು ಹೊಂದಿದೆ. ಈಗಾಗಲೇ ಸಿನಿಮಾವು ಅಂತರರಾಷ್ತ್ರೀಯ ಮಟ್ಟದಲ್ಲಿ ಸದ್ದು ಮಾಡಿ, ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಿರಿಯ ನಟ,ನಿರ್ದೇಶಕ ಸುನಿಲ್‍ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ನಿರ್ಮಾಪಕರು ನಮ್ಮ ಒಡೆಯರ್ ಮೂವೀಸ್‍ನಡಿ ಸಿದ್ದಪಡಿಸಿರುವ ಮೊದಲ ಚಿತ್ರ. ಕಾಸರವಳ್ಳಿ, ಶೇಷಾದ್ರಿ ತರದ ಚಿತ್ರ ನಾವೂ ಯಾಕೆ ಮಾಡಬಾರದು ಎಂಬ ಪ್ರಶ್ನೆ ಕಾಡಿತು. ನಾನು ಹೇಗೆ ಬರೆದರೂ ಅದರಲ್ಲಿ ಕಮರ್ಷಿಯಲ್ ಅಂಶ ಇರುತ್ತಿತ್ತು. ಅದಕ್ಕೆ ಹೊಸ ಪ್ರತಿಭೆಗೆ ಅವಕಾಶ ನೀಡಲಾಯಿತು. ನಿರ್ಮಾಪಕನಾಗಿ ನನಗೂ ಹೊಸ ಅನುಭವ. ನಾಯಕ ಹೊರತುಪಡಿಸಿ ಉಳಿದವರೆಲ್ಲರೂ ಡೊಳ್ಳು ಕಲಾವಿದರೇ ಅಭಿನಯಿಸಿದ್ದಾರೆ ಎಂಬುದರ ಮಾಹಿತಿ ನೀಡಿದರು.
ನಾಯಕ ಕಾರ್ತಿಕ್‍ಮಹೇಶ್, ನಾಯಕಿ ನಿಧಿಹೆಗ್ಡೆ, ಚಂದ್ರಮಯೂರ್, ಬಾಬುಹಿರಣಯ್ಯ, ಶರಣ್ಯಸುರೇಶ್, ಸಂಕಲನಕಾರ ಬಿ.ಎಸ್.ಕೆಂಪರಾಜ್, ಛಾಯಾಗ್ರಾಹಕ ಅಭಿಲಾಶ್‍ಕಲಥಿ ಮುಂತಾದವರು ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು. ಸಮಾರಂಭವೊಂದರಲ್ಲಿ ಡೊಳ್ಳು ತಂಡವನ್ನು ನೋಡಿದಾಗ ನನಗೆ ಈ ಕಂಟೆಂಟ್ ಹೊಳೆಯಿತು. ಅದೇ ಸಮಯದಲ್ಲಿ ನಿರ್ಮಾಪಕರು ಕಾಲ್ ಮಾಡಿ ಕಿರುಚಿತ್ರ ಚೆನ್ನಾಗಿದೆ. ನಮಗೊಂದು ಒಳ್ಳೆ ಸಿನಿಮಾ ಮಾಡಿಕೊಡಿ ಎಂದು ಕೇಳಿದರು. ಕಲೆಯ ಜತೆಗೆ ಪ್ರೀತಿಯ ಕಥೆ ಕೂಡ ಇದರಲ್ಲಿದೆ. ಡೊಳ್ಳು ಅದರ ತಂಡ, ಅವರ ಬದುಕು, ಜತೆಗೆ ನಗರೀಕರಣದಂಥ ಸಮಸ್ಯೆಗಳನ್ನು ಇಟ್ಟುಕೊಂಡು ಚಿತ್ರಕಥೆ ಮಾಡಿದ್ದೇವೆ. ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಕಲಾವಿದರು ನಟಿಸಿದ್ದಾರೆಂದು ಸಿನಿಮಾ ಹುಟ್ಟಿದ ಬಗೆಯನ್ನು ಸಾಗರ್ ಪುರಾಣಿಕ್ ಹೇಳಿಕೊಂಡರು.
Previous Articleಉದಯಪುರದಲ್ಲಿ Police ಆಡಳಿತಕ್ಕೆ ಸರ್ಜರಿ..
Next Article ಕುಖ್ಯಾತ ಬೈಕ್ ಕಳ್ಳನ ಬಂಧನ 10 ಲಕ್ಷ ಮಾಲು ವಶ!