ಗದಗ: ನರಗುಂದ ರೈತ ಬಂಡಾಯ ದೇಶದ ಗಮನ ಸೆಳೆದ ಚಳುವಳಿಯಾಗಿದೆ. ರೈತ ಹೋರಾಟದಲ್ಲಿ ಹುತಾತ್ಮ ರಾರ ರೈತರ ಸ್ಮರಣೆಗಾಗಿ ಪ್ರತಿ ವರ್ಷ ರೈತ ಹುತಾತ್ಮ ದಿನಾಚಣೆ ಆಚರಿಸಲಾಗುತ್ತದೆ. ಇಂದು ಗದಗ ಜಿಲ್ಲೆಯ ನರಗುಂದದಲ್ಲಿ ಹುತಾತ್ಮ ದಿನಾಚರಣೆಯಲ್ಲಿ ಹೈಡ್ರಾಮಾ ನಡೆಯಿತು.
ಸ್ಮಾರಕಕ್ಕೆ ಸಚಿವ ಸಿ.ಸಿ. ಪಾಟೀಲ ಮಾಲಾರ್ಪಣೆ ಮಾಡಲು ಬಂದಾಗ ತಳ್ಳಾಟ ನೂಕಾಟ ನಡೆಯಿತು.
ನರಗುಂದ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರಗಲ್ಲಿಗೆ ಸಚಿವ ಸಿ.ಸಿ. ಪಾಟೀಲ್ ಮಾಲಾರ್ಪಣೆ ಮಾಡಲು ಬಂದಿದ್ದರು.
1980ರಲ್ಲಿ ನಡೆದ ನರಗುಂದ ರೈತ ಬಂಡಾಯದ ಹುತಾತ್ಮರ ಸ್ಮರಣಾರ್ಥ ವೀರಗಲ್ಲು ನಿರ್ಮಿಸಲಾಗಿದೆ.
ವೀರಗಲ್ಲು ಸ್ಮಾರಕ ನಿರ್ಮಾಣ ಮಾಡಬೇಕೆಂದು ಬಹಳಷ್ಟು ವರ್ಷದಿಂದ ರೈತರ ಒತ್ತಾಯಿಸುತ್ತಿದ್ದಾರೆ. ಇಂದು ಹುತಾತ್ಮ ದಿನಾಚರಣೆಯಲ್ಲಿ ವೀರಗಲ್ಲು ನಿರ್ಮಾಣಕ್ಕೆ ರೈತರು ಪಟ್ಟು ಹಿಡಿದಿದರು.
ಈ ಬಗ್ಗೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ರೈತರು ಮುಂದಾಗಿದ್ರು. ಇದೇ ವೇಳೆ ವೀರಗಲ್ಲಿಗೆ ಗೌರವ ಸಲ್ಲಿಸಲು ಸಚಿವ ಸಿ.ಸಿ. ಪಾಟೀಲ ಕೂಡ ಬಂದರು. ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಮುಂದಾದ ಸಚಿವ ಸಿ.ಸಿ. ಪಾಟೀಲರಿಗೆ ರೈತರು ಮಾಲಾರ್ಪಣೆ ಮಾಡಲು ಅವಕಾಶ ನೀಡಲಿಲ್ಲ. ಇದರಿಂದ ರೈತರು ಹಾಗು ಸಿ.ಸಿ. ಪಾಟೀಲರ ಬೆಂಬಲಿಗರ ಮಧ್ಯೆ ನೂಕಟ ತಳ್ಳಾಟ ನಡೆಯಿತು. ನೂಕು ನುಗ್ಗಲ ಮಧ್ಯೆಯೇ ಸಚಿವ ಪಾಟೀಲ್ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದರು.
ಈ ಗಲಾಟೆ ಗದ್ದಲ ನಡುವೆಯೇ ವೀರಗಲ್ಲಿಗೆ ಗೌರವ ಸಲ್ಲಿಸಿ ಸಿ.ಸಿ. ಪಾಟೀಲ್ ಮನೆಗೆ ನಡೆದರು.
ಇಂದು ರೈತ ಹುತಾತ್ಮ ದಿನಾಚರಣೆ: ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಸಚಿವ ಸಿ.ಸಿ. ಪಾಟೀಲರಿಗೆ ವಿರೋಧ
Previous Articleವಿವಿ ಬಾಗಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಒಳ ಬಂದ ನೂತನ ಕುಲಪತಿ
Next Article ಋಣ ತೀರಿಸುವ ಸಮಯ ಬಂದಿದೆ…!