ಹಾಸನ,ಜು.15- ಹಳೆಯ ದ್ವೇಷಕ್ಕೆ ಎರಡು ಸಾವಿರ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ನಿರ್ದಾಕ್ಷಣ್ಯವಾಗಿ ಕಡಿದು ಹಾಕಿರುವ ಘಟನೆ ಬೇಲೂರು ತಾಲೂಕಿನ ದೇವಿಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ದೇವಿಹಳ್ಳಿಯ ವೆಂಕಟಬೋಯಿಗೆ ಸೇರಿದ ಜಮೀನಿಗೆ ರಾತ್ರಿ 8ರ ವೇಳೆ ನುಗ್ಗಿದ ಕಿಡಿಗೇಡಿಗಳು ಎರಡು ಸಾವಿರ ಅಡಿಕೆ ಗಿಡಗಳನ್ನು ಕಡಿದು ನೆಲಕ್ಕುರುಳಿಸಿ ಪರಾರಿಯಾಗಿದ್ದಾರೆ.
ವೆಂಕಟಬೋಯಿ ಅವರ ಮಗ ರಮೇಶ್ ಜಮೀನಿನ ಬಳಿ ಇಂದು ಬೆಳಗ್ಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಮಕ್ಕಳಂತೆ ಬೆಳಸಿದ್ದ ಅಡಿಕೆ ಗಿಡಗಳು ನೆಲಸಮವಾಗಿರುವುದನ್ನು ಕಂಡು ಕಣ್ಣೀರು ಹಾಕಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ ವೆಂಕಟಬೋಯಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Previous Articleಉಡುಪಿ ಜಿಲ್ಲೆಗೆ ಇಎಸ್ ಐ ಆಸ್ಪತ್ರೆ ಮಂಜೂರು-ಕರಾವಳಿಯ ಕಾರ್ಮಿಕ ಬಂಧುಗಳಿಗೆ ವೈದ್ಯಕೀಯ ಸೇವೆಗೆ ನೆರವು
Next Article ಕಿಕ್ ಬಾಕ್ಸಿಂಗ್ ನಿಂದ ನನ್ನ ಮಗನ ಕೊಲೆಯಾಗಿದೆ: ತಂದೆಯ ಆರೋಪ