ಹಾಸನ,ಆ.18-ನಿಧಿ ಆಸೆ ತೋರಿಸಿ ದಂಪತಿಗೆ ಕಳ್ಳ ಸ್ವಾಮೀಜಿ ಲಕ್ಷಾಂತರ ವಂಚನೆ ನಡೆಸಿರುವ ಘಟನೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆದಲ್ಲಿ ನಡೆದಿದೆ.
ದೊಡ್ಡಹಳ್ಳಿಯ ಕಳ್ಳ ಸ್ವಾಮೀಜಿ ಮಂಜುನಾಥ್, ತೋಟದಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿ ಚಂದ್ರೇಗೌಡ ಅವರಿಂದ 1.5 ಲಕ್ಷ ರೂ ಪಡೆದು ವಂಚನೆ ಮಾಡಿ ಪರಾರಿಯಾಗಿದ್ದಾನೆ.
ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ಭೂಮಿಯೊಳಗೆ ಹೂತಿಟ್ಟು ಮಂಜುನಾಥ್, ಬಳಿಕ ನಿಮ್ಮ ಮನೆಯ ತೋಟದಲ್ಲಿ ನಿಧಿ ಇದೆ ಎಂದು ನಂಬಿಸಿ ಮತ್ತೆ ಅದೇ ವಿಗ್ರಹವನ್ನು ಭೂಮಿಯಿಂದ ಹೊರ ತೆಗೆಸಿದ್ದಾನೆ.
ನಿಧಿ ಸಿಕ್ಕಿದೆ ಎನ್ನುವ ಖುಷಿಯಲ್ಲಿದ್ದ ಕುಟುಂಬ ಸ್ವಾಮೀಜಿಗೆ 1.5 ಲಕ್ಷ ಹಣ ನೀಡಿದೆ. ದಿನ ಕಳೆದಂತೆ ಭೂಮಿಯಿಂದ ಹೊರ ತೆಗೆದಿರುವುದು ಕಬ್ಬಿಣ ವಿಗ್ರಹ ಎಂದು ಬೆಳಕಿಗೆ ಬರುತ್ತಿದ್ದಂತೆ ಕಳ್ಳ ಸ್ವಾಮೀಜಿ ಮಂಜುನಾಥ್ ಅಲಿಯಾಸ್ ಮಂಜೇಗೌಡ ತಲೆ ಮರೆಸಿಕೊಂಡಿದ್ದಾನೆ.
ನಿಧಿ ಆಸೆ ತೋರಿಸಿ ನಂಬಿಸಿ ವಂಚನೆ ಮಾಡಿರುವ ಕಳ್ಳ ಸ್ವಾಮೀಜಿ ವಿರುದ್ಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.