ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾಂತೇಶ್ ಶಿರೋಳ್, ಮಂಜುನಾಥ್ ದುಮ್ಮವಾಡ ಬಂಧಿತ ಆರೋಪಿಗಳು. ಬೆಳಗಾವಿಯ ರಾಮದುರ್ಗ ಬಳಿ ಈ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ನಡೆದ ನಾಲ್ಕು ಗಂಟೆಯಲ್ಲೇ ಹಂತಕರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಹಾಗು ರಾಮದುರ್ಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗುರೂಜಿಯನ್ನು ಕೊಲೆ ಮಾಡಿದ ಬಳಿಕ ಬಟ್ಟೆ ಬದಲಾಯಿಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಬೆಳಗಾವಿ ಮಾರ್ಗದಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಿಬ್ಬರೂ ಗುರೂಜಿ ಆಪ್ತರು ಎನ್ನಲಾಗಿದೆ.