ಬೆಂಗಳೂರು : ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ರಾಘವೇಂದ್ರ ಶೆಟ್ಟಿ ಒರ್ವ ಕ್ರಿಮಿನಲ್ ಎಂದು ಗುಡುಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ.ರೂಪಾ ಮೌದ್ಗೀಲ್ ನಿಗಮದ ಅಧ್ಯಕ್ಷರಾಗಿ ಶೆಟ್ಟಿ ಬೇನಾಮಿ ಹೆಸರಲ್ಲಿ ಹಣ ಪಡೆಯುತ್ತಿದ್ದರು ಎಂದು ಅರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು ನಿರಾಧಾರ, ದಾಖಲೆ ಇಲ್ಲದ ಸುಳ್ಳು ಆರೋಪ ಮಾಡುತ್ತಿರುವ ಬೇಳೂರು ರಾಘವೇಂದ್ರ ಶೆಟ್ಟಿ ಈಗ ತಾನೆ ಅಧ್ಯಕ್ಷ ಸ್ಥಾನ ಕಳೆದುಕೊಂಡ ಹತಾಶೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ತನ್ನ ಸಂಬಳಲ್ಲದೇ, 4 ಜನರು ತನ್ನ ಬಳಿ ನಿಗಮದ ಕೆಲಸ ಮಾಡುತ್ತಿರುವುದಾಗಿ ದಾಖಲೆ ನೀಡಿ ಆ ನಾಲ್ಕೂ ಜನರ ಸಂಬಳ ತಾನೇ ತೆಗೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ತನ್ನ ಬಳಿ ಕೆಲಸ ಮಾಡುತ್ತಿದ್ದಾರೆ ಎನ್ನಲಾದ ಆ ವ್ಯಕ್ತಿಗಳು ಈತನ ಬಳಿ ಕೆಲಸಕ್ಕೆ ಇಲ್ಲ. ಅಪ್ಪಿ ತಪ್ಪಿ ಇದ್ದರೂ ನಿಗಮದ ಕಚೇರಿಯಲ್ಲಿ ಕಂಡಿಲ್ಲ, ನಿಗಮದ ಕೆಲಸ ಮಾಡಿಲ್ಲ, ಕಚೇರಿಯಲ್ಲಿ ಹಾಜರಾತಿ ಇಲ್ಲ.
ಇಲ್ಲದ ವ್ಯಕ್ತಿಗಳಿಗೆ ಸಂಬಳ ಕೊಡುವುದು ಸಾರ್ವಜನಿಕ ಬೊಕ್ಕಸಕ್ಕೆ ಮೋಸ ಮಾಡಿದಂತೆ ಅಲ್ಲವೇ? ಹಾಗಾಗಿ ಈ ಬೇನಾಮಿಗಳ ಸಂಬಳ ತಡೆ ಹಿಡಿದಿದ್ದೇನೆ ಎಂದು ತಿಳಿಸಿದ್ದಾರೆ.
ಅವರಿಗೆ ಸಂಬಳ ಕೊಟ್ಟಿಲ್ಲ ಎಂದು ಶೆಟ್ಟಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ.
2 ಮೂರುವರೆ ಲಕ್ಷ ಗಂಧದ ಸಾಮಾನು ತೆಗೆದುಕೊಂಡು ಹೋಗಿರುವ ಶೆಟ್ಟಿ, ಇದುವರೆಗೆ ಅದರ ಹಣ ಪಾವತಿಸಿಲ್ಲ. ಆದರೆ, ನಾನು ಮುಖ್ಯಮಂತ್ರಿಗಳು, ಸಣ್ಣ ಕೈಗಾರಿಕೆ ಸಚಿವರು ಹಾಗು ದೆಹಲಿಯ ಕರಕುಶಲ ಅಭಿವೃದ್ದಿ ಆಯುಕ್ತರಿಗೆ ಔಪಚಾರಿಕವಾಗಿ ಕೊಟ್ಟಿರುವ ಕೆಲವು ಕರಕುಶಲ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಿದ್ದೇನೆಂದು ಆಪಾದಿಸಿದ್ದಾರೆ. ಆದರೆ
ಇವೆಲ್ಲವೂ ಅಧಿಕೃತವಾಗಿ ಕೊಟ್ಟಿರುವುದಾಗಿದೆ. ರಾಘವೇಂದ್ರ ಶೆಟ್ಟಿ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ದೂರಿದ್ದಾರೆ.
ರಾಘವೇಂದ್ರ ಶೆಟ್ಟಿಯ ಮೇಲೆ ನಿಗಮಕ್ಕೆ ವಂಚನೆ ಮಾಡಿದ ಗುರುತರ ಆರೋಪವಿದೆ. ಸುಳ್ಳು ಸಂಬಳ ನೌಕರರ ಹೆಸರಲ್ಲಿ ತೆಗೆದು ಕೊಂಡಿರುವುದು, ಲಕ್ಷ ಲಕ್ಷ ಗಂಧದ ಸಾಮಾನು ಮನೆಗೆ ಸಾಗಿಸುವುದು, ಅಯೋಧ್ಯಾ, ಡೆಲ್ಲಿ, ಕಾಶಿ, ಈ ರೀತಿ ನಿಗಮದ ಕೆಲಸ ಇಲ್ಲದೇ ಇರುವ ಕಡೆ ಸುತ್ತಾಡಿ ಲಕ್ಷ ಲಕ್ಷ ರೂಪಾಯಿಗಳ ವಿಮಾನ ಯಾನ, ಫೈವ್ ಸ್ಟಾರ್ ಹೋಟೆಲ್ ಬಿಲ್ಲುಗಳನ್ನು ಪಾವತಿಸಿ ನಿಗಮಕ್ಕೆ ನಷ್ಟವೆಸಗಿದ್ದಾರೆಂದು ಆರೋಪಿಸಿದ್ದಾರೆ.
ರಾಘವೇಂದ್ರ ಶೆಟ್ಟಿ ಒರ್ವ ಕ್ರಿಮಿನಲ್…! ರೂಪಾ ಮೌದ್ಗೀಲ್ ಆರೋಪ
Previous Articleಮಂಗಳೂರಿಗೆ ಆಗಮಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ
Next Article ಸುಖಾಸುಮ್ಮನೆ ವಾಹನ ತಡೆಯುವ ಪೇದೆ..!!