ಮಡಿಕೇರಿ: ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ.
ಭಾರೀ ಶಬ್ದದೊಂದಿಗೆ ಭೂ ಕುಸಿತ ಉಂಟಾಗಿದ್ದು ಸುಮಾರು 5 ಎಕರೆಯಷ್ಟು ಜಾಗ ಕೊಚ್ಚಿ ಹೋಗಿದೆ.
ನಿಶಾನಿ ಬೆಟ್ಟದ ಮೇಲ್ಭಾಗದಿಂದ ದೊಡ್ಡ ದೊಡ್ಡ ಕಲ್ಲುಗಳು ಹಾಗು ಮರಗಳು ಕೊಚ್ಚಿ ಬರುತ್ತಿದೆ. ಭೂಕುಸಿತ ಉಂಟಾದ ಸ್ಥಳದಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.