Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ದಾಪುಗಾಲು – CM
    ರಾಜ್ಯ

    ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ದಾಪುಗಾಲು – CM

    vartha chakraBy vartha chakraಫೆಬ್ರವರಿ 20, 202349 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಫೆ.20-

    ಸಾಂಕ್ರಾಮಿಕ Covid, ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರವಾಹದಂತಹ ಸವಾಲುಗಳ ನಡುವೆಯೂ ಕರ್ನಾಟಕ ಸರ್ಕಾರ ಆರ್ಥಿಕ ರಂಗದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ಹದಿನೈದು ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  (Basavaraj Bommai) ವಿಧಾನಸಭೆಯಲ್ಲಿ  ಹೇಳಿದ್ದಾರೆ.

    ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಅವರು ‌ತೆರಿಗೆ ಸಂಗ್ರಹಣೆಯಲ್ಲಿ ದಾಖಲೆ ನಿರ್ಮಿಸಿರುವುದು ರಾಜ್ಯದ ಆರ್ಥಿಕ ಚಕ್ರ ಮೇಲ್ಮುಖವಾಗಿರುವುದಕ್ಕೆ ಕನ್ನಡಿ ಎಂದು ಬಣ್ಣಿಸಿದರು.

    ತೆರಿಗೆ ದಕ್ಷತೆ, ತೆರಿಗೆ ವಂಚಕರನ್ನು ಪತ್ತೆ ಮಾಡುವುದರ ಜೊತೆಗೆ ಎಲ್ಲ ಬಾಬ್ತುಗಳಿಂದ ಬರಬೇಕಾದ ತೆರಿಗೆ ಸಂಗ್ರಹಕ್ಕೆ ವಿಶೇಷ ಗಮನ ಹರಿಸಿದ್ದರಿಂದ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದರು. GST ಪರಿಹಾರ ಧನವಾಗಿ ಹದಿನೆಂಟು ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ.

    ರೈತ ಶಕ್ತಿ ಯೋಜನೆಯಿಂದ 53 ಲಕ್ಷ ರೈತರಿಗೆ 330 ಕೋಟಿ ರೂ. ವಿವಿಧ ರೂಪದ ಪರಿಹಾರ ಒದಗಿಸಲಾಗಿದೆ. ಕಳೆದ ವರ್ಷ 20 ಸಾವಿರ ರೈತರಿಗೆ ಸಾಲ ನೀಡಿದ್ದೇವೆ. ಮಾರ್ಚ್ ಅಂತ್ಯದ ಒಳಗೆ 30 ಸಾವಿರ ರೈತರಿಗೆ ಸಾಲ ವಿತರಣೆ ಮಾಡುವ ಗುರಿ ಇದೆ ಎಂದರು.

    ಯಶಸ್ವಿನಿಗೆ 300 ಕೋಟಿ ಮೀಸಲಿಟ್ಟು ರೈತರಿಗಾಗಿ ಈ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ಆಹಾರ ಉತ್ಪಾದನಾ ಘಟಕಗಳಿಗೆ ಉತ್ತೇಜಿಸಲು ಸರಿಯಾದ ಮಾರುಕಟ್ಟೆ ಕಲ್ಪಿಸಲಾಗಿದೆ. ರೈತರಿಗೋಸ್ಕರ, ರೈತರಿಂದ ದೊಡ್ಡ ಪ್ರಮಾಣದ ಮಾರುಕಟ್ಟೆ ಈ ವಲಯದಲ್ಲಿ ಸೃಜನೆಯಾಗಿದ್ದು, ಸರ್ಕಾರದ ಪ್ರೋತ್ಸಾಹದಿಂದ ಇದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಅಂಕಿ-ಅಂಶಗಳು ಸಹಿತ ವಿವರಿಸಿದರು.

    5 ಲಕ್ಷ ಮೆಟ್ರಿಕ್ ಟನ್‍ಗಿಂತ ಹೆಚ್ಚು ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ. ಇದು ದಾಖಲೆ. MSP ದರವನ್ನು ಕೇಂದ್ರ ಹೆಚ್ಚಿಸಿದ್ದರಿಂದ ಎಲ್ಲ ರೈತರ ರಾಗಿಯನ್ನು ಖರೀದಿಸಿ ರೈತರ ಬೆಂಬಲಕ್ಕೆ ನಿಲ್ಲಲಾಯಿತು. ತೊಗರಿ ಬೆಳೆಗೆ ರೋಗ ಬಂದಿದ್ದರಿಂದ ಹೆಕ್ಟೇರ್‍ಗೆ ಹತ್ತು ಸಾವಿರ ರೂಪಾಯಿ ನೀಡಲಾಗಿದೆ. ಜೋಳ, ಕುಚಲಕ್ಕಿ ಮೊದಲಾದವುಗಳನ್ನೂ ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ ಎಂದು ತಿಳಿಸಿದರು.

    ಆರ್ಥಿಕ ಮತ್ತು ಸಾಮಾಜಿಕ ಚಕ್ರ ನಿರಂತರವಾಗಿ ತಿರುಗುತ್ತಿರಬೇಕು. ಇದು ನಿಂತರೆ ಮರು ಆರಂಭಕ್ಕೆ ಬಹಳ ಯತ್ನ ಮಾಡಬೇಕಾಗುತ್ತದೆ. ಶಾಲೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯ  ಗತಿ ನಾಡಿಗೆ ಬರುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಹಾಗೂ ತಮ್ಮ ಸರ್ಕಾರ ಕೋವಿಡ್‍ನಿಂದಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದವು. ಆಮ್ಲಜನಕದ ಆಕ್ಸಿಜನ್ ಬೇರೆ ಬೇರೆ ರಾಜ್ಯಗಳಲ್ಲಿ ಬಹಳ ಕಷ್ಟವಿತ್ತು. ಜನ ರಸ್ತೆಯ ಮೇಲೆ ಪರದಾಡುತ್ತಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa ) ಆಕ್ಸಿಜನ್ ತಯಾರಕರನ್ನು ಕರೆಸಿ ಉತ್ಪಾದನೆ ಹೆಚ್ಚಿಸಿದರು. ಕರ್ನಾಟಕಕ್ಕೆ ಗರಿಷ್ಟ ಮಿತಿಯಲ್ಲಿ ಆಕ್ಸಿಜನ್ ಕೊಟ್ಟೆವು ಎಂದು ಹೇಳಿದರು.

    ಸಂಕಷ್ಟದಲ್ಲಿದ್ದಾಗ ಅವುಗಳಿಗೆ  ಸ್ಪಂದಿಸಿದಾಗಲೇ ಸರ್ಕಾರದ ಜೀವಂತಿಕೆ ಗೊತ್ತಾಗುವುದು. ಆರೋಗ್ಯ ಸಿಬ್ಬಂದಿ, ಪೊಲೀಸ್ ಸೇರಿದಂತೆ ಎಲ್ಲರೂ ತ್ವರಿತವಾಗಿ ಕೆಲಸ ಮಾಡಿದರು. ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

    ಲಸಿಕಾಕರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಹೀಗಾಗಿ ನಾಲ್ಕನೇ ಅಲೆಯಿಂದ ನಮ್ಮ ದೇಶಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ನಮ್ಮ ವಿಜ್ಞಾನಿಗಳ ಸಾಧನೆಯ ಮೇಲೆ ನಂಬಿಕೆ ಇಟ್ಟು ಮೋದಿ ಹುರಿದುಂಬಿಸಿದ್ದು ಶ್ರೇಯಸ್ಸಿನ ಕೆಲಸ ಎಂದು ನುಡಿದರು.

    ಮನೆಗಳಿಗೆ ನಲ್ಲಿ ನೀರು:

    ಜಲ ಜೀವನ ಮಿಷನ್ ಯೋಜನೆಯಡಿ ಮುಂದಿನ ವರ್ಷ ರಾಜ್ಯದ 25 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ಅನುಮೋದಿಸಲಾಗಿದೆ. ನಲ್ಲಿ ಮೂಲಕ ಮನೆಗಳಿಗೆ ನೀರು ಒದಗಿಸಲುವ ಯೋಜನೆಗೆ ಬಜೆಟ್ ಅನುದಾನ ಒದಗಿಸಲಾಗಿದೆ. ಉತ್ತಮ ನೀರು ಕೊಟ್ಟಾಗ ಜನರ ಸ್ವಾಸ್ಥ್ಯವೂ ಹೆಚ್ಚುತ್ತದೆ ಎಂದರು.

    ಹಿಂದುಳಿದ ವರ್ಗದ ಎರಡೂವರೆ ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದಿದ್ದಾರೆ. ಹೆಚ್ಚುವರಿ 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು 250 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ವಿದ್ಯಾಸಿರಿ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿದರು

    ವಿವೇಕ ಶಾಲೆ:

    ಪ್ರಸಕ್ತ ಜೂನ್ ತಿಂಗಳ ಒಳಗೆ ರಾಜ್ಯಾದ್ಯಂತ ಎಂಟು ಸಾವಿರ ಶಾಲಾ ಕೊಠಡಿಗಳು ನಿರ್ಮಾಣ ಪೂರ್ಣಗೊಳ್ಳಿದ್ದು, ಇದಕ್ಕೆ ವಿವೇಕ ಎಂದು ಹೆಸರು ಇಡಲು ಸರ್ಕಾರ ತೀರ್ಮಾನಿಸಿದೆ ಎಂದರು.

    ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಒಟ್ಟು 8 ಸಾವಿರ ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಾಣ ಮಾಡಲಿದೆ. ಹಿಂದಿನ ಯಾವುದೇ ಸರ್ಕಾರಗಳು ಏಕಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟು ನೀಡುತ್ತಿದ್ದೇವೆ. ನಮ್ಮ ಸರ್ಕಾರ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ ಇದಾಗಿದೆ ಎಂದು ಬಣ್ಣಿಸಿದರು.

    ಕಳೆದ ವರ್ಷ ನಮ್ಮ ಸರ್ಕಾರ 15 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿತ್ತು.ಇದನ್ನು ಕೆಲವರು ಪ್ರಶ್ನಿಸಿ ಹೈಕೋರ್ಟ್‍ಗೆ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದಲ್ಲಿ ಅರ್ಜಿ ಇತ್ಯರ್ಥವಾಗಿದೆ. ಶೀಘ್ರದಲ್ಲೇ ನೇಮಕಾತಿ ಆದೇಶ ಪತ್ರ ನೀಡಲಾಗುವುದು. 15 ಸಾವಿರದಲ್ಲಿ ಕಲ್ಯಾಣಕರ್ನಾಟಕಕ್ಕೆ 5 ಸಾವಿರ ಮೀಸಲಿಟ್ಟಿದ್ದೇವೆ. ಮುಂದಿನ ವರ್ಷವು ಕೂಡ ನೇಮಕಾತಿ ಅಗತ್ಯವಿದೆ. ಎಲ್ಲೆಲ್ಲಿ ಶಿಕ್ಷಕರ ಅಗತ್ಯವಿದೆಯೋ ಅಂತಹ ಕಡೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದರು.

    #karnataka #yediyurappa Bangalore basavaraj bommai bommai ED Government gst m modi narendra modi ಆರೋಗ್ಯ ನರೇಂದ್ರ ಮೋದಿ ನ್ಯಾಯ ಬೊಮ್ಮಾಯಿ ವಿದ್ಯಾರ್ಥಿ ಶಾಲೆ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleರೂಪಾ – ಸಿಂಧೂರಿಗೆ Show cause
    Next Article ಪ್ರೀತಿಗಾಗಿ ಬಂದ ಯುವತಿ Pakistan ಕ್ಕೆ ಗಡಿಪಾರು
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 1xbet ರಲ್ಲಿ ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • online drugstore ರಲ್ಲಿ ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    • DanielCix ರಲ್ಲಿ ಕಾಫಿ ಡೇ ಸಿದ್ದಾರ್ಥ ಸಾವಿನ ರಹಸ್ಯ ಬಯಲು.?
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮತ್ತೊಮ್ಮೆ ಮೋದಿ ವಿಜಯ? #varthachakra #bihar #election #result #nda #modi #winner #announce #latestnews
    Subscribe