ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಅಬಲವಾಡಿಯಲ್ಲಿ ವಿಶೇಷ ಹಬ್ಬವೊಂದು ಜರುಗಿದೆ.
ವಿಜೃಂಭಣೆಯಿಂದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ನಡೆದಿದೆ.ಉತ್ಸವದ ಅಂಗವಾಗಿ ಭಕ್ತರಿಗೆ ತಾವರೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾವರೆ ಎಲೆಯಲ್ಲಿ ಊಟ ಮಾಡಿ ಪುನೀತರಾಗಿದ್ದಾರೆ. ಮದ್ದೂರು ತಾಲೂಕಿನ ಆಬಲವಾಡಿಯಲ್ಲಿ ನಡೆಯುವ ತಾವರೆ ಎಲೆ ಊಟ ಮಾಡಿ ತೋಪಿನ ತಿಮ್ಮಪ್ಪನ ಸನ್ನಿಧಿ ಯಲ್ಲಿ ನಡೆಯುವ ಹರಿಸೇವೆ ಉತ್ಸವದಲ್ಲಿ ಭಕ್ತರಿಗೆ ತಾವರೆ ಎಲೆ ಊಟ ಮಾಡುವುದು ಪದ್ಧತಿ. ಹೀಗಾಗಿ ಹರಿಸೇವೆ ದಿನದ ತಾವರೆಯ ಎಲೆಯ ಊಟಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.ಬರುವ ಭಕ್ತರಿಗೆಲ್ಲ ತಾವರೆ ಎಲೆಯಲ್ಲಿ ಅನ್ನಸಂತಪರ್ಣೆ ಮಾಡುವುದು ಪದ್ಧತಿ ಜಾರಿಯಲ್ಲಿದೆ. ಹೀಗಾಗಿ
ಸಾವಿರಾರು ಭಕ್ತರಿಂದ ತಾವರೆ ಎಲೆಯಲ್ಲಿ ಸಹಪಂಕ್ತಿ ಭೋಜನ ಜರುಗಿತು.
Previous Articleಮಂಡ್ಯ ಜಿಲ್ಲಾಧಿಕಾರಿ ಫೇಸ್ ಬುಕ್ ಹ್ಯಾಕ್..!
Next Article ಆಯೂಬ್ ಕೊಲೆ ಆರೋಪಿ ಮತೀನ್ ಸೆರೆ