ಮಂಗಳೂರು: ಮಳೆ ನಿಂತರು ಕಡಲ್ಕೊರೆತದ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಮಂಗಳೂರು ನಗರ ಹೊರವಲಯದ ಮೀನಾಕಳಿ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು 500 ಕ್ಕೂ ಅಧಿಕ ಮನೆಗಳು ಆತಂಕದಲ್ಲಿದೆ. ಇಂದು ಬೆಳಿಗ್ಗೆಯಿಂದಲೂ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದ್ದು ಸ್ಥಳೀಯರ ಕಣ್ಣೆದುರೆ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗಿದೆ. ಇದರಿಂದ 500 ಕ್ಕೂ ಅಧಿಕ ಮನೆಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.