ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನ ಪ್ರೀತಿಯ ಬಲೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿ ಬಿದ್ದಿದ್ದರು.
ಪ್ರದೀಪ್ ಎಂದು ಯುವಕ ಪರಿಚಯಿಸಿಕೊಂಡಿದ್ದ. ಯುವಕನ ಮಾತಿನ ಮೋಡಿಗೆ ಯುವತಿ ಕ್ಲೀನ್ ಬೌಲ್ಡ್ ಆಗಿದ್ದಳು.
ಯುವಕನ ಜತೆ ಮದುವೆಗೆ ಪಟ್ಟು ಹಿಡಿದಿದ್ದಳು. ಮದುವೆ ಪ್ರಸ್ತಾಪಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಅಂತಿಮವಾಗಿ ನ್ಯಾಯವಾದಿ ಶೈಲಜಾ ರಾಜೇಶ್ ಅವರ ಬಳಿ ಮನೆಯ ಸದಸ್ಯರು ವಿಷಯ ಪ್ರಸ್ತಾಪಿಸಿ ನೆರವು ಕೋರಿದರು. ಯುವತಿ ಜತೆ ಮಾತುಕತೆ ವೇಳೆ ಶೈಲಜಾ ರಾಜೇಶ್ ಅವರಿಗೆ ಯುವತಿ ಪ್ರೀತಿಯ ಬಲೆಗೆ ಬಿದ್ದಿರುವುದು ಸ್ಪಷ್ಟವಾಗಿತ್ತು.
ಅಂತಿಮವಾಗಿ ಯುವಕನನ್ನು ಪತ್ತೆ ಹಚ್ಚಲು ಪೊಲೀಸರ ಸಹಕಾರ ಕೋರಿದರು. ವಿಟ್ಲ ಮತ್ತು ಶಂಕರನಾರಾಯಣ ಠಾಣೆ ಪೊಲೀಸರ ನೆರವಿನಿಂದ ಸಿದ್ದಾಪುರದಲ್ಲಿ ಸ್ನೇಹಿತನ ಮನೆ ಪತ್ತೆ ಹಚ್ಚಲಾಯಿತು.
ಪ್ರದೀಪ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ತನ್ನ ನಿಜವಾದ ವ್ಯಕ್ತಿತ್ವ ಮರೆಮಾಚಿದ್ದ. ಪ್ರದೀಪ್ ಮಂಗಳಮುಖಿಯಾಗಿದ್ದ. ನಿಜವಾದ ಹೆಸರು ಜ್ಯೋತಿ ಎಂದಾಗಿತ್ತು.
ನಾಲ್ಕು ವರ್ಷಗಳ ಕಾಲ ಯುವತಿ, ಫೇಸ್‌ಬುಕ್ ಗೆಳೆಯ ಯುವಕ ಎಂದೇ ನಂಬಿ ವಿವಾಹವಾಗಲು ನಿರ್ಧರಿಸಿದ್ದಳು.