ಮಂಗಳೂರು : ಬೆಳ್ಳಾರೆಯಲ್ಲಿ ಬರ್ಬರ ಹತ್ಯೆಯಾದ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ ಎನ್ ಐ ಎ ತನಿಖೆಗೆ ಸೂಚಿಸಿದೆ. ಆದರೆ, ಸದ್ಯ ಪ್ರಕರಣವನ್ನು ಪೊಲೀಸ್ ಇಲಾಖೆ ಎನ್ ಐಎ’ಗೆ ಹಸ್ತಾಂತರ ಮಾಡಿಲ್ಲ ಎಂಬುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಳ್ಳಾರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್ ಐ ಎ ತನಿಕಾ ತಂಡಕ್ಕೆ ಟ್ರಾನ್ಸ್ ಫರ್ ಆರ್ಡರ್ ಆದಾಗ ಅವರು ಇಲ್ಲಿಗೆ ಆಗಮಿಸುತ್ತಾರೆ. NIA ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಪ್ರಕರಣದ ಎಲ್ಲಾ ಮಾಹಿತಿಗಳನ್ನು ಅವರಿಗೆ ನೀಡುತ್ತಿದ್ದೇವೆ. ಬೇರೆ ಸೆಂಟ್ರಲ್ ಏಜೆನ್ಸಿ ಜೊತೆಗೂ ನಾವು ಸಂಪರ್ಕದಲ್ಲಿದ್ದೇವೆ ಎಂದು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.