ಮಂಗಳೂರು: ಹಿಜಾಬ್ ವಿವಾದದ ಬೆನ್ನಲ್ಲೇ ದ.ಕ ಜಿಲ್ಲೆಯಲ್ಲಿ ಹೊಸ ಪಿಯು ಕಾಲೇಜು ಸ್ಥಾಪನೆಗೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಮುಂದಾಗಿದೆ. ಪಿಯು ಬೋರ್ಡ್‌ಗೆ ಕಾಲೇಜು ಸ್ಥಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಈ ಬಾರಿ ಹೊಸ ಕಾಲೇಜು ಸ್ಥಾಪನೆಗೆ ಅನುಮತಿ ಕೋರಿ ದ.ಕ ಜಿಲ್ಲೆಯ 14 ಅರ್ಜಿಗಳು ಪಿಯು ಬೋರ್ಡ್‌ಗೆ ಸಲ್ಲಿಕೆಯಾಗಿವೆ. ಈ ಅರ್ಜಿಗಳ ಪೈಕಿ 13 ಅರ್ಜಿಗಳು ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಸೇರಿವೆ. ಸಲ್ಲಿಸಿದ್ದ 14 ಅರ್ಜಿಗಳ ಪೈಕಿ ಕಾಲೇಜು ಸ್ಥಾಪಿಸಲು ಗುರುಪುರದ ಮುಸ್ಲಿಂ ಆಡಳಿತ ಒಂದು ಕಾಲೇಜಿಗೆ ಹಾಗು ಸುಬ್ರಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಪಿಯು ಬೋರ್ಡ್ ಅನುಮತಿ ನೀಡಿದ್ದು, ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳು ಬಾಕಿಯಿದೆ.