ಹುಬ್ಬಳ್ಳಿ: ಇಲ್ಲಿನ ರಾಷ್ಟ್ರಧ್ವಜ ತಯಾರಕ ಘಟಕಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲ್ಪಾಡ್ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮೋದಿ ಮೇಕ್ ಇನ್ ಇಂಡಿಯಾ ಅಂತಾರೆ.
ಆದ್ರೆ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್ ಚೀನಾ ಅಂತಾರೆ. ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿಗೆ ಅಪಮಾನ ಮಾಡಿದ್ದಾರೆ. ಬ್ರಿಟಿಷರನ್ನು ದೇಶದಿಂದ ಓಡಿಸಲು ದೊಡ್ಡ ಅಸ್ತ್ರವಾಗಿದ್ದೆ ಖಾದಿ.
ಈಗ ಅಂತಹ ಖಾದಿಗೆ ಕೇಂದ್ರ ಸರ್ಕಾರದಿಂದ ದ್ರೋಹವಾಗಿದೆ. ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ.
ನಮ್ಮ ರಾಷ್ಟ್ರಧ್ವಜವನ್ನು ನಮ್ಮ ದೇಶದಲ್ಲಿ ತಯಾರು ಮಾಡದೆ ಇರುವುದು ನಮಗೆ ದೊಡ್ಡ ಅಪಮಾನ.
ನಮ್ಮ ಸಂಸ್ಕೃತಿ, ಪರಂಪರೆಗೆ ಧಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ.
ಪಾಲಿಸ್ಟರ್‌ಗೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಸಿದ್ಧವಾದ ಧ್ವಜಗಳು ಹಾಗೆ ಉಳಿದಿವೆ. ಈ ಧ್ವಜಗಳನ್ನು ನಮ್ಮ ಕಾಂಗ್ರೆಸ್ ಪಕ್ಷ ಖರೀದಿ ಮಾಡಲಿದೆ.
ಅದಕ್ಕಿಂತಲೂ ಮುಖ್ಯವಾಗಿ ಖಾದಿ ಗ್ರಾಮೋದ್ಯೋಗ ಉಳಿಯಬೇಕಿದೆ.
ಅದಕ್ಕಾಗಿ ಕಾಂಗ್ರೆಸ್ ಸಂಘಟಿತ ಹೋರಾಟ ಮಾಡುತ್ತದೆ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಬಟ್ಟೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು