‘ಆಪರೇಷನ್ ಅಲಮೇಲಮ್ಮ’ ಹಾಗು ‘ಕವಲುದಾರಿ’ ಚಿತ್ರಗಳ ಮೂಲಕ ವೀಕ್ಷಕರನ್ನು ಮನರಂಜಿಸಿದ್ದ ನಟ ರಿಷಿ ಮತ್ತೊಂದು ಇಂಟ್ರೆಸ್ಟಿಂಗ್ ಸಿನಿಮಾ ಮೂಲಕ ಬರಲಿದ್ದಾರೆ. ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾ ಟೈಟಲ್ ಎಷ್ಟು ವಿಭಿನ್ನವಾಗಿದೆಯೋ ರಿಷಿ ಲುಕ್ ಕೂಡ ಅಷ್ಟೇ ಡಿಫರೆಂಟ್ ಆಗಿದೆ. ಜುಲೈ 22 ರಂದು ZEE5 ನಲ್ಲಿ ರಿಷಿ ಅಭಿನಯದ ಈ ಚಿತ್ರ ಪ್ರೀಮಿಯರ್ ಆಗಲಿದೆ ಇಸ್ಲಾವುದ್ದೀನ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಿಷಿಗೆ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ.