ಚಿತ್ರದುರ್ಗ: ಆಗಸ್ಟ್ ಮೂರರಂದು ರಾಹುಲ್ ಗಾಂಧಿ ಚಿತ್ರದುರ್ಗ ಹಾಗೂ ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಚಿತ್ರದುರ್ಗದಲ್ಲಿ ಮುರುಘಾ ಮಠದ ಶ್ರೀ ಗಳನ್ನು ಭೇಟಿ ಮಾಡಿ ಆರ್ಶೀವಾದ ಪಡೆಯಲಿದ್ದಾರೆ. ಬಳಿಕ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಆಗಸ್ಟ್ ಎರಡರಂದು ಆಗಮಿಸಿ ಕಾಂಗ್ರೆಸ್ ವ್ಯವಹಾರಗಳ ಸಮಿತಿ ಜತೆ ಸಭೆ ನಡೆಸಲಿದ್ದಾರೆ ಎಂದರು. ಕರಾವಳಿ ಭಾಗದಲ್ಲಿ ಸರಣಿ ಹತ್ಯೆ ಪ್ರಕರಣ ವಿಚಾರ ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಸರ್ಕಾರ ಜನರ ನಡುವೆ ತಾರತಮ್ಯ ಮಾಡುತ್ತಿದೆ ಎಂದರು. ಸುಳ್ಯದಲ್ಲಿ ಹಿಂದೂ ಹತ್ಯೆ ಆಗಿದ್ದು ಅನ್ಯಾಯ, ಖಂಡಿಸುತ್ತೇವೆ. ಸರ್ಕಾರ ನ್ಯಾಯ ಒದಗಿಸಿಕೊಡಬೇಕು. ಅದಕ್ಕೂ ಮುನ್ನ ಮುಸ್ಲಿಂ ವ್ಯಕ್ತಿಯ ಹತ್ಯೆ ಆಗಿದ್ದು ತಪ್ಪು. ಸುರತ್ಕಲ್ ನಲ್ಲಿ ಆಗಿರುವ ಹತ್ಯೆಯೂ ಖಂಡನೀಯ ಎಂದರು.
ಸರ್ಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಯಾರದ್ದೇ ಕೊಲೆ ನಡೆದರೂ ತಪ್ಪು, ಸರ್ಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಜಾತಿವಾದಿ ಡಿಕೆಶಿ, ಸಿದ್ಧರಾಮಯ್ಯ ಸಿಎಂ ಆಗಲ್ಲ ಎಂದು ಈಶ್ವರಪ್ಪ ಹೇಳಿಕೆ ವಿಚಾರ ಅವರು ಯಾರ ಹೇಳಿಕೆಗೂ ನಾನು ಉತ್ತರ ನೀಡುವ ಸ್ಥಿತಿಯಲ್ಲಿಲ್ಲ. ಜನ ಉತ್ತರ ಕೊಡ್ತಾರೆ, ಉತ್ತರ ಕೊಡುವಾಗ ಕೊಡುತ್ತೇನೆ ಎಂದರು.