ಸ್ಯಾಂಡಲ್ವುಡ್ನಲ್ಲಿ ಜನರ ಟೇಸ್ಟ್ ಬದಲಾದಂತೆ ಸಿನಿಮಾ ಮಾಡುವ ರೀತಿ ಕೂಡ ಬದಲಾಗಿದೆ. ವಿಭಿನ್ನ ಕತೆಯ ಮೂಲಕ ಜನರನ್ನು ರಂಜಿಸಲು ಹೊಸ ಬಗೆಯ ಸಿನಿಮಾಗಳು ರೆಡಿಯಾಗುತ್ತಿವೆ. ಜನರ ಅಭಿರುಚಿಗೆ ತಕ್ಕ ಚಿತ್ರ ಮಾಡಲು ನಿರ್ದೇಶಕರು ಹಾಗೂ ಕಲಾವಿದರು ಸಹ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅದೇ ರೀತಿಯ ಸಿನಿಮಾವೊಂದು ಸುದ್ದಿಯಲ್ಲಿದ್ದು, ಆ ಸಿನಿಮಾ ತನ್ನ ಹೆಸರಿನ ಮೂಲಕ ಬಹಳ ಸದ್ದು ಮಾಡುತ್ತಿದೆ. ಆ ಸಿನಿಮಾದ ಹೆಸರು 9 ಸುಳ್ಳು ಕಥೆಗಳು . ಸದ್ಯ ಈ ಸಿನಿಮಾಗೆ ಶಿವಣ್ಣ ಹಾಗೂ ರಿಷಭ್ ಶೆಟ್ಟಿ ಸಾಥ್ ನೀಡಿದ್ದಾರೆ. ನವರಸಗಳನ್ನಾಧರಿಸಿ “9 ಸುಳ್ಳು ಕಥೆಗಳು” ಹೇಳಿದ್ದಾರೆ ಶೃಂಗಾರ, ಹಾಸ್ಯ, ಕರುಣ ಸೇರಿದಂತೆ ಹೀಗೆ ನವರಸಗಳಿದೆ ಇಂತಹ ನವರಸಗಳನ್ನು ಆಧರಿಸಿ “9 ಸುಳ್ಳು ಕಥೆಗಳು” ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ ಮಂಜುನಾಥ್ ಮುನಿಯಪ್ಪ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕರಿ ಸುಬ್ಬು, ಸುಕೃತ ವಾಗ್ಲೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಖ್ಯಾತ ನಟ ಶಿವರಾಜಕುಮಾರ್ ಅವರು ಟ್ರೇಲರ್ ಗೆ ಧ್ವನಿ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಸಂಗೀತ ನಿರ್ದೇಶನದಲ್ಲಿ ಆರು ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ.
Previous Articleಪಾಲಿಸ್ಟರ್ ಬಟ್ಟೆಯ ಧ್ವಜದ ಚಿಂತನೆ ರಾಷ್ಟ್ರದ್ರೋಹವಾಗಿದೆ- ಉಮಾಶ್ರೀ
Next Article ದಕ್ಷಿಣ ಕನ್ನಡ ಉದ್ವಿಗ್ನ ಕಲ್ಲುತೂರಾಟ