ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಚಿತ್ರದ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಚಿತ್ರದ ಟ್ರೇಲರ್, ಹಾಡುಗಳು ಹಿಟ್‌ಲಿಸ್ಟ್ ಸೇರಿವೆ.
ಬಹು ಭಾಷೆಗಳಲ್ಲಿ ಸಿದ್ದಗೊಂಡಿರುವ “ವಿಕ್ರಾಂತ್ ರೋಣ’ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಗೆ ಸಲ್ಮಾನ್ ಖಾನ್ ಸಾಥ್ ನೀಡುತ್ತಿದ್ದಾರೆ. ಈಗ ಮತ್ತೊಂದಿಷ್ಟು ಭಾಷೆಯ ರಿಲೀಸ್‌ಗೆ ಬೇರೆ ಬೇರೆ ಸಂಸ್ಥೆಗಳು, ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಅದರಲ್ಲಿ ದುಲ್ಕರ್ ಸಲ್ಮಾನ್ ಕೂಡಾ ಒಬ್ಬರು.
“ವಿಕ್ರಾಂತ್ ರೋಣ’ ಚಿತ್ರದ ಮಲಯಾಳಂ ರಿಲೀಸ್‌ಗೆ ಖ್ಯಾತ ನಟ ದುಲ್ಕರ್ ಸಲ್ಮಾನ್ ಮುಂದೆ ಬಂದಿದ್ದು, ಅವರ ವೇಫರೆರ್ ಫಿಲಂಸ್‌ನಡಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಮೂಲ ಕನ್ನಡ ಸಿನಿಮಾವೊಂದಕ್ಕೆ ದುಲ್ಕರ್ ಸಾಥ್ ನೀಡಿದಂತಾಗುತ್ತದೆ.
ಇನ್ನು ಚಿತ್ರದ ತಮಿಳು ಅವತರಣಿಕೆಯನ್ನು ಜೀ ಸ್ಟುಡಿಯೋಸ್, ತೆಲುಗು ರಿಲೀಸ್‌ಗೆ ಕಾಸ್ಮೋಸ್ ಎಂಟರ್‌ಟೈನ್ಮೆಂಟ್ ಹಾಗು ಕೆಎಫ್ಸಿ ಸಾಥ್ ನೀಡುತ್ತಿದೆ. ಕನ್ನಡ ವರ್ಶನ್ ವಿತರಣೆ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಮೂಲಕ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಚಿತ್ರದ ವಿದೇಶಿ ಬಿಡುಗಡೆ ಹಕ್ಕನ್ನು 128 ಮೀಡಿಯಾ ಪಡೆದುಕೊಂಡಿದೆ.
ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ “ವಿಕ್ರಾಂತ್ ರೋಣ’ ಚಿತ್ರ ಅದ್ಧೂರಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಜಾಕ್ ಮಂಜು ನಿರ್ಮಿಸಿದ್ದು, ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ.
Previous Articleಶ್ರೀಲಂಕಾದಲ್ಲಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಮಹಿಳೆಯರು
Next Article ಕವರ್ ಸಹಿತ ಚಾಕಲೇಟ್ ನುಂಗಿ ಬಾಲಕಿ ಸಾವು