ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರಕ್ಕಾಗಿ ಡೆಲಿವರಿ ಬಾಯ್ ಆಗಿ ಸತೀಶ್ ನೀನಾಸಂ ಪುಡ್ ಸರ್ವಿಸ್ ಮಾಡುತ್ತಿದ್ದು, ಬಹಳ ವಿಭಿನ್ನವಾಗಿ ಸಿನಿಮಾ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಲಗ್ಗೆರೆಯ ಆಸರೆ ಅನಾಥಶ್ರಮಕ್ಕೆ ನಟ ಇಂದು ಊಟ ತಂದು ನೀಡಿದ್ದಾರೆ. ಆಸರೆ ಅನಾಥಶ್ರಮದಲ್ಲಿರುವ ಎಲ್ಲರಿಗೂ ನಾನ್ ವೆಜ್ ಊಟದ ವ್ಯವಸ್ಥೆಯನ್ನು ನಟ ಮಾಡಿಸಿದ್ದು, ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಸತೀಶ್ ನೀನಾಸಂ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇದರಲ್ಲಿ ಅನಾಥನ ಪಾತ್ರ ಅವರದ್ದಾಗಿದ್ದು, ಈ ಕಾರಣದಿಂದ ಅನಾಥಶ್ರಮಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ. ನೀರ್ ದೋಸೆ ಸಿನಿಮಾ ನಿರ್ದೇಶಕ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಪೆಟ್ರೋಮ್ಯಾಕ್ಸ್ ನಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಕಾರುಣ್ಯ ರಾಮ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ಇದ್ದಾರೆ ಸತೀಶ್ ನೀನಾಸಂ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣ . ಕತೆ, ಚಿತ್ರಕತೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮೆರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.
Previous Articleಚಂದ್ರಶೇಖರ ಗುರೂಜಿ ಕೊಲೆ ತನಿಖೆಗೆ ಐದು ತಂಡ ರಚನೆ: ಆಯುಕ್ತ ಲಾಭುರಾಮ್
Next Article ಸರ್ಕಾರವನ್ನು ವಜಾಗೊಳಿಸಿ..!