ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿರುವ ಗಂಧದ ಗುಡಿ ಪ್ರಾಜೆಕ್ಟ್ ಬಗ್ಗೆ ಹೊಸದೊಂದು ಸುದ್ದಿ ಬಂದಿದೆ. ಅಪ್ಪು ತುಂಬಾ ಇಷ್ಟಪಟ್ಟು ಮಾಡಿರುವ ಡಾಕ್ಯುಮೆಂಟರಿ ಇದಾಗಿದ್ದು, ಇದಕ್ಕಾಗಿ ಅವರು ಹರಸಾಹಸವನ್ನೇ ಪಟ್ಟಿದ್ದಾರೆ. ಈ ಡಾಕ್ಯುಮೆಂಟರಿಯ ಟ್ರೈಲರ್ ಕಳೆದ ವರ್ಷ ನವೆಂಬರ್ ಒಂದರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನ ಪುನೀತ್ ಅಗಲಿದರು. ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ಗಂಧದ ಗುಡಿ ಟ್ರೈಲರ್ ಕೊಡಬೇಕು ಎನ್ನುವ ಅವರ ಕನಸು ಇದೀಗ ಈಡೇರಲಿದೆ. ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಮಾಡಬೇಕೆನ್ನುವುದು ಅಪ್ಪು ಕನಸಾಗಿದ್ದರಿಂದ ಅದೇ ತಿಂಗಳು ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ ನಲ್ಲಿ ನೂರಾರು ಥಿಯೇಟರ್ ನಲ್ಲಿ ಈ ಡಾಕ್ಯುಮೆಂಟರಿ ತೆರೆ ಕಾಣಲಿದೆ. ಥಿಯೇಟರ್ ನಲ್ಲೇ ಇದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಕೂಡ ಆಗಿತ್ತು. ಗಂಧದಗುಡಿ ಸಾಕ್ಷ್ಯಾಚಿತ್ರವು ಅಕ್ಟೋಬರ್ 27 ಅಥವ ನವೆಂಬರ್ 3ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯವೊಂದು ಹರಿದಾಡುತ್ತಿದೆ. ಅಲ್ಲದೇ ಪೋಸ್ಟರ್ ಸಹ ಒಂದು ಬಿಡುಗಡೆ ಆಗಿದೆ. ಇನ್ನು, ಪಿಆರ್ಕೆ ಸ್ಟುಡಿಯೋಸ್ ನಿರ್ಮಾಣದಲ್ಲಿ ಎಲ್ಲಾ ಸಿನಿಮಾಗಳು ಹೆಚ್ಚಾಗಿ ಗುರುವಾರ ರಿಲೀಸ್ ಆಗುವುದರಿಂದ ಗಂಧದಗುಡಿ ಡಾಕ್ಯೂಮೇಂಟರಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Previous Articleನ್ಯಾಯಾಂಗ ತನಿಖೆ ಅಗತ್ಯ..!!
Next Article ಚಂದ್ರಶೇಖರ ಗುರೂಜಿ ಅಂತಿಮ ದರ್ಶನಕ್ಕೆ ಜನಸಾಗರ!