ಶಿವಮೊಗ್ಗ,ಆ.16- ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಹಾಗು ಟಿಪ್ಪು ಸುಲ್ತಾನ್ ಫೋಟೋ ವಿವಾದವು ನಗರದಲ್ಲಿ ಭುಗಿಲೆದ್ದು, ಎರಡು ಸಮುದಾಯದ ನಡುವೆ ಕಿಚ್ಚು ಹಚ್ಚಿಸಿ ಹಿಂಸಾಚಾರ ನಡೆದ ಪರಿಸ್ಥಿತಿಯು ತಹಬದಿಗೆ ಬಂದಿದ್ದರೂ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.
ಯಾವಾಗ ಗಲಭೆ ಮತ್ತೆ ಸಂಭವಿಸಲಿದೆಯೋ ಎನ್ನುವ ಆತಂಕ ನಗರದ ಜನರಲ್ಲಿ ಮನೆ ಮಾಡಿದ್ದು ಒಂಟಿಯಾಗಿ ಓಡಾಡಲು ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಯಭೀತಿಯಲ್ಲಿರುವ ಜನರ ಆತಂಕ ನಿವಾರಣೆ ಮಾಡಲು ಮುಂಜಾಗ್ರತಾ ಕ್ರಮವಾಗಿ ಅತಿಸೂಕ್ಷ್ಮ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ನಗರದೆಲ್ಲೆಡೆ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಇಬ್ಬರು ಹಿಂದೂ ಯುವಕರಿಗೆ ಚಾಕು ಇರಿದ ಸಂಬಂಧಿಸಿದಂತೆ ಓರ್ವ ನಿಗೆ ಗುಂಡು ಹೊಡೆದಿದ್ದು ಆತ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರ ಗುಂಡೇಟು ಕಾಲಿಗೆ ತಗುಲಿರುವ ಬುದ್ಧ ನಗರದ ಮಹಮ್ಮದ್ ಜಬೀವುಲ್ಲಾ ನನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜೆಸಿ ನಗರದ ನದೀಮ್ (25) ಹಾಗು ಬುದ್ಧ ನಗರದ ಅಬ್ದುಲ್ ರೆಹಮಾನ್ ಸೇರಿ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗಿದ್ದು ನಿಷೇದಾಜ್ಞೆ ಮುಂದುವರೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
Previous Articleಕಡಲೂರ ಕಣ್ಮಣಿಗೆ ವಿರಾಟ್ ವಿಶಸ್
Next Article ವಿನಾಯಿತಿ ಮುಕ್ತ ಅರ್ಥ ವ್ಯವಸ್ಥೆ..!