ಹುಬ್ಬಳ್ಳಿ : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ಯ ಹಾಲಪ್ಪನವರ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತಿದ್ದು ಸರಿಯಾಗಿ ಆಲಿಸುತ್ತಿಲ್ಲ. ಸರಿಯಾಗಿ ಕ್ಷೇತ್ರಕ್ಕೆ ಬರ್ತಾ ಇಲ್ಲ ಎಂದು ಆಕ್ರೋಶಗೊಂಡ ಆಮ್ ಆದ್ಮ ಪಕ್ಷದ ಕಾರ್ಯಕರ್ತರು ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ನೆಲಕ್ಕೆ ಕುಳಿತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಹಾಲಪ್ಪ ಆಚಾರ್ಯ ಅವರು ಧಾರವಾಡ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಸರಿಯಾಗಿ ಕ್ಷೇತ್ರಕ್ಕೆ ಬರುತ್ತಿಲ್ಲ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ರಸ್ತೆ , ಕುಡಿಯುವ ನೀರು, ವಿದ್ಯುತ್ ದೀಪ ಸರಿಯಾಗಿಲ್ಲ. ಬೇಕಾಬಿಟ್ಟಿ ಕಾಮಗಾರಿ ಮಾಡಲಾಗುತ್ತದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಅನೇಕ ಸಮಸ್ಯೆಗಳಿವೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇನ್ನ ಅನೇಕ ಕಟ್ಟಡ ಕಾಮಗಾರಿ ಹಾಗು ನೆರೆ ಸಂತ್ರಸ್ತರ ಪರಿಹಾರ ನೀಡುವಲ್ಲಿ ವಿಳಂಬ ಜೊತೆಗೆ ಭ್ರಷ್ಟಾಚಾರ ತಾಂಡವಾಡುತ್ತಿವೆ. ಸ್ಮಾರ್ಟ್ ಸಿಟಿ ಅವೈಜ್ಞಾನಿಕವಾಗಿದ್ದು ಬಿಆರ್ ಟಿಎಸ್ ಕಳಪೆಯಾಗಿದ್ದು ಕಾಮಗಾರಿ ಈ ಕುರಿತು ಯಾರಿಗೆ ಹೇಳಬೇಕು. ನಮ್ಮ ಸಮಸ್ಯೆ ಕೇಳುವವರು ಯಾರು ಇಲ್ಲಾ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಾಕಾರ ಕುಳಿತುಕೊಂಡು ಪ್ರತಿಭಟನೆ ಮಾಡದಂತೆ ಮನವೊಲಿಸಲು ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಕ್ಯಾರೇ ಅನ್ನದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ಸಚಿವರಿಗೆ ಘೇರಾವ್ ಹಾಕಿದ ಎಪಿಪಿ ಕಾರ್ಯಕರ್ತರು
Previous Articleತುಂಬಿ ಹರಿಯುತ್ತಿರುವ ಸಪ್ತ ನದಿಗಳು: ಪ್ರವಾಹದ ಆತಂಕದಲ್ಲಿ ಜನರು
Next Article ಮನೆ ಕುಸಿದು ಗಾಯಗೊಂಡ ಮಹಿಳೆ : ಆರೋಗ್ಯ ವಿಚಾರಿಸಿದ ಸಚಿವರು !